

ಕಾರ್ಕಳ: ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಜಗೋಳಿ ಸಮೀಪ ಮುಟ್ರಾಲ್ ದೇವಸ್ಥಾನದ ಬಳಿ ಜು. 3 ರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಪ್ರವೀಣ್ ಭಂಡಾರಿ ಎಂಬವರ ಪತ್ನಿ ಭವ್ಯಾ ಭಂಡಾರಿ (31) ಎಂದು ಗುರುತಿಸಲಾಗಿದೆ.
ಭವ್ಯಾ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.
ಈ ಕುರಿತು ತನಿಖೆ ನಡೆಯುತ್ತಿದೆ.ಮೃತರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.