
ಉಡುಪಿ: ಕಳೆದ ಎರಡು ದಿನಗಳಿಂದ ಸುರಿದ ರಣ ಭೀಕರ ಮಳೆಗೆ ಕರಾವಳಿಯ ಹಲವಾರು ಪ್ರದೇಶಗಳಲ್ಲಿ ಭಾರೀ ಹಾನಿ ಸಂಭವಿಸಿದೆ.
ಭಾರೀ ಮಳೆಯಿಂದ ಉಡುಪಿಯ ಸಂತೆಕಟ್ಟೆ ಬೈಪಾಸ್ ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಇದರಿಂದಾಗಿ ತಮ್ಮ ದೈನಂದಿನ ಸಂಪರ್ಕಕ್ಕಾಗಿ ಈ ರಸ್ತೆಯನ್ನೇ ಅವಲಂಬಿಸಿದ್ದ ಜನರಲ್ಲಿ ಸಂಪರ್ಕ ಕಡಿಯುವ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

