ವಾರಾಣಸಿ : ಪ್ರಧಾನಿ ಮೋದಿ ವಾರಾಣಸಿ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸತತ ಮೂರನೇ ಬಾರಿಗೆ ಮೋದಿ ವಾರಾಣಸಿ ಕ್ಷೇತ್ರದಿಂದ ದಿಗ್ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ವಿರುದ್ಧ ಪ್ರಧಾನಿ ಮೋದಿ ಭರ್ಜರಿ ಗೆಲುವು ಕಂಡಿದ್ದಾರೆ. 1,52, 513 ಮತಗಳ ಅಂತರದಿಂದ ಪ್ರಧಾನಿ ಮೋದಿ ಗೆದ್ದಿದ್ದಾರೆ. ಮೋದಿ 6,12,970 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 4,60,457 ಮತಗಳನ್ನು ಪಡೆದಿದ್ದಾರೆ.