ಉತ್ತರಪ್ರದೇಶ: ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಟವೆಲ್ ನ್ನು ಆಕೆಯ ಹೊಟ್ಟೆಯೊಳಗೆ ಬಿಟ್ಟ ಬಗ್ಗೆ ವರದಿಯಾಗಿದೆ.
ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾದತ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸೈಫೀ ನರ್ಸಿಂಗ್ ಹೋಮ್‌ನಲ್ಲಿ ನಜ್ರಾನಾ ಎಂಬ ಮಹಿಳೆ
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಆಕೆಯ ಹೊಟ್ಟೆಯ ಒಳಗೆ ವೈದ್ಯರು ಟವೆಲ್ ಬಿಟ್ಟಿದ್ದಾರೆ.
ಅಮ್ರೋಹಾದಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಟವೆಲ್ ಕಂಡು ಬಂದಿದೆ.
ಈ ಕುರಿತು ತನಿಖೆಗೆ ಮುಖ್ಯ ವೈದ್ಯಾಧಿಕಾರಿ ಸಿಂಘಾಲ್ ಸೂಚಿಸಿದ್ದಾರೆ.