ಉಡುಪಿ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವಳ ಕತ್ತಿನಿಂದ ಕಳ್ಳನೋರ್ವ ಚಿನ್ನದ ಸರ ಎಗರಿಸಿದ ಘಟನೆ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರದಲ್ಲಿ ನಡೆದಿದೆ.
ಕಾಂತಾವರ ನಿವಾಸಿ ಗೋಪಿ (66) ಎಂಬವರು ದೇವಸ್ಥಾನಕ್ಕೆ ಹೋಗಿ ವಾಪಾಸ್ಸು ಬರುವ ವೇಳೆ ಘಟನೆ ನಡೆದಿದ್ದು, ಕಳ್ಳತನವಾದ ಚಿನ್ನದ ಮೌಲ್ಯ ರೂ. 1,20,000 ಎಂದು ಅಂದಾಜಿಸಲಾಗಿದೆ. ಕಳ್ಳನು ಚಿನ್ನದ ಚೈನನ್ನು ಬಲವಂತವಾಗಿ ಎಳೆದುಕೊಂಡು ಹೋಗುವ ವೇಳೆ ಕೈಗಳಿಂದ ಬಲವಾಗಿ ತಳ್ಳಿದ ಪರಿಣಾಮ ಗೋಪಿಯವರ ಎಡ ಕೈಗೆ, ಕುತ್ತಿಗೆಗೆ, ತೋಳಿಗೆ ನೋವು ಮತ್ತು ಗಾಯವಾಗಿರುತ್ತದೆ ಎಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.