March 21, 2026
WhatsApp Image 2024-08-03 at 2.55.32 PM

ಮಂಗಳೂರು: ಧಿಡೀರ್ ಅನಾರೋಗ್ಯಕ್ಕೀಡಗಿರುವ ಉಪ್ಪಿನಂಗಡಿಯ ಕಾಲೇಜು ವಿದ್ಯಾರ್ಥಿಯೋರ್ವನು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಉಪ್ಪಿನಂಗಡಿಯ ಸರಕಾರಿ ಪ.ಪೂ.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ (17) ಮೃತಪಟ್ಟವನು. ಕೊಯಿಲದ ಗಂಡಿಬಾಗಿಲು ನಿವಾಸಿ ಸಿರಾಜುದ್ದೀನ್ ಕಾಲೇಜಿಗೆಂದು ಬೆಳಗ್ಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಜೊತೆಗಿದ್ದವರು ಸಿರಾಜುದ್ದೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿರಾಜುದ್ದೀನ್ ಮೃತಪಟ್ಟಿದ್ದಾನೆ. ಆತನ ಮೃತದೇಹವನ್ನು ಕಾಲೇಜಿಗೆ ತಂದು ಅಂತಿಮ ದರ್ಶನಕ್ಕಿಡಲಾಯಿತು.

About The Author

Leave a Reply

Your email address will not be published. Required fields are marked *

You cannot copy content of this page.