

ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಈ ಬಾರಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಆದರೆ ಬಾಗಲಕೋಟೆಯ ಹುಡುಗನೊಬ್ಬ ಆರಕ್ಕೆ ಆರೂ ಸಬ್‌ಜೆಕ್ಟ್‌ನಲ್ಲಿ ಫೇಲ್ ಆಗಿದ್ದಾನೆ. ಆದರೆ ಮಗ ಅನುತ್ತೀರ್ಣ ಆಗಿದ್ದಾನೆ ಎಂದು ಹೆತ್ತವರು ಕೋಪಗೊಳ್ಳದೇ, ಮಗನಿಗೆ ಇನ್ನಷ್ಟು ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬುದು ಮಕ್ಕಳ ಭವಿಷ್ಯದ ಮೊದಲನೇ ಹೆಜ್ಜೆ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೇ ಹತ್ತನೇ ಪರೀಕ್ಷೆ ಅಂದ್ರೆ ಸಾಕು ಎಲ್ಲರೂ ಒಮ್ಮೆ ಭಯಪಡುತ್ತಾರೆ. ಫೇಲ್ ಆದ್ರೆ ಅಂತೂ ಭವಿಷ್ಯನೇ ಹೋಯ್ತು ಅಂತಾ ಅದೆಷ್ಟೋ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬರು ತಂದೆ ಫೇಲ್ ಆದ ಮಗನನ್ನ ಕುಗ್ಗದಂತೆ ಮಾಡದೆ ಕೇಕ್ ತಿನ್ನಿಸಿ, ಆತನಿಗೆ ಧೈರ್ಯ ತುಂಬಿದ್ದಾರೆ. ಅಷ್ಟಕ್ಕೂ ಈ ಅಪರೂಪದ ಸನ್ನಿವೇಶ ನಡೆದಿದ್ದು ಬಾಗಲಕೋಟೆಯ ನವನಗರದಲ್ಲಿ. ಫೇಲ್ ಆದ ಮನೆ ಮಗನಿಗೆ ತಂದೆ, ತಾಯಿ, ಸಹೋದರ, ಸಹೋದರಿ ಅಜ್ಜಿ ಹಾಗೂ ಕುಟುಂಬದ ಇತರ ಸದಸ್ಯರು ಕೇಕ್ ತಿನ್ನಿಸಿ ಧೈರ್ಯ ಹೇಳಿದ್ದಾರೆ. ಅಭಿಷೇಕ ಯಲ್ಲಪ್ಪ ಚೊಳಚಗುಡ್ಡ ಎಂಬುವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 200 ಅಂಕ (ಶೇ 32 ರಷ್ಟು) ಅಂಕ ಪಡೆದು ಆರಕ್ಕೆ ಆರೂ ವಿಷಯದಲ್ಲಿ ಫೇಲ್ ಆಗಿದ್ದಾರೆ. ಇದನ್ನೂ ಓದಿ: SSLC ಫಲಿತಾಂಶ; ಈ ಬಾರಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ವಿದ್ಯಾರ್ಥಿ ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್‌ನಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಅಭಿಷೇಕನಿಗೆ ಹದಿನೈದು ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ನೆನಪಿನ ಶಕ್ತಿ ಕಳೆದುಕೊಂಡಿದ್ದರು. ಈ ಕಾರಣದಿಂದ ಉತ್ತರ ನೆನಪಿಟ್ಟುಕೊಂಡು ಬರೆಯಲು ವಿಫಲವಾಗಿದ್ದಾನೆ. ಇದೇ ಕಾರಣದಿಂದ ವಿದ್ಯಾರ್ಥಿ ಫೇಲ್ ಆಗಿದ್ದಾನೆ ಎನ್ನಲಾಗಿದೆ.
ಫೇಲ್ ಆದ ಹಿನ್ನೆಲೆ ಬೇಜಾರಿನಲ್ಲಿದ್ದ ಮಗನನ್ನು ಕಂಡು ಸರ್ಪ್ರೈಜ್ ಆಗಿ ಕೇಕ್ ತಂದು ಕುಟುಂಬ ಸಂಭ್ರಮಾಚರಣೆ ಮಾಡಿದೆ. ಸದ್ಯ ಈ ಬಗ್ಗೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.