ಬೆಳ್ತಂಗಡಿ: ಅಂಬಡಬೆಟ್ಟು ಸೇತುವೆ ಶಿಥಿಲ – ಘನವಾಹನ ಸಂಚಾರ ನಿಷೇಧ..!

ಬೆಳ್ತಂಗಡಿ ತಾಲೂಕಿನ ಕಲ್ಲಂಜ ಗ್ರಾಮದ ನಿಡಿಗಲ್ ಮೂಲಕ ನಡ ಗ್ರಾಪಂ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಪಂ ವ್ಯಾಪ್ತಿಯ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ಅಂಬಡಬೆಟ್ಟು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಸೇತುವೆಯು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನವಾಹನ ಸಂಚಾರವನ್ನು ನಿಬರ್ಂಧಿಸಲಾಗಿದೆ. ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದಿಂದ, ಸೂರ್ಯ, ದೇವಸ್ಥಾನ ಮಾರ್ಗವಾಗಿ ಕೇಳ್ತಾಜೆ ಮುಖಾಂತರ ಸಂಚರಿಸಬೇಕು. ಬೆಳ್ತಂಗಡಿ- ಕಿಲ್ಲೂರು- ಕಾಜೂರು ರಸ್ತೆಯ ಇಂದಬೆಟ್ಟು ಗ್ರಾಮದಿಂದ ನೇತ್ರಾವತಿ ಎಸ್‌ಟಿ ಕಾಲನಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ರಸ್ತೆಯಾಗಿ, ರಾಜ್ಯ ಹೆದ್ದಾರಿ-276 ರಸ್ತೆಯಾದ ಸುಳ್ಯ, ಪೈಚಾರು, ಬೆಳ್ಳಾರೆ, ಸವಣೂರು, ಕುದ್ಮಾರು, ಅಲಂಕಾರು, ಸುರುಳಿ, ಮಾದೇರಿ, ಮಟ್ರಮೆ, ಧರ್ಮಸ್ಥಳ, ಗುಂಡಾಜೆ, ದಿಡುಪೆ ರಸ್ತೆಯನ್ನು ಸಂಪರ್ಕಿಸುವಂತೆ ಡಿಸಿ ಸೂಚಿಸಿದ್ದಾರೆ

Check Also

ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ

ಕೋಝೀಕೋಡ್(ಕೇರಳ): ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ …

Leave a Reply

Your email address will not be published. Required fields are marked *

You cannot copy content of this page.