May 25, 2025
WhatsApp Image 2025-05-01 at 9.15.14 AM

ನವದೆಹಲಿ: ಕರ್ನಾಟಕದ ಕೆಎಂಎಫ್  ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ ಹಾಗೂ ಮದರ್ ಡೈರಿ ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ ಇದೀಗ ಜನಪ್ರಿಯ ಡೈರಿ ಬ್ರಾಂಡ್ ಅಮುಲ್ ಹಾಲಿನ ದರ  ಕೂಡ ಎರಡು ರೂಪಾಯಿ ಹೆಚ್ಚಳವಾಗಿದೆ. ಪರಿಷ್ಕೃತ ದರ ಮೇ 1ರಿಂದಲೇ ಜಾರಿಗೆ ಬರುತ್ತಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ  ತಿಳಿಸಿದೆ. ಇದರೊಂದಿಗೆ, ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆ ಹೊಡೆತ ತಟ್ಟಿದಂತಾಗಲಿದೆ.

ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳಿಗೆ ಅನ್ವವಾಗುತ್ತದೆ.

ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀಟರ್ ಮತ್ತು 2 ಲೀಟರ್ ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ, 2025 ರ ಜನವರಿಯಲ್ಲಿ, 1 ಲೀಟರ್ ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.

ಅಮುಲ್ ಹಾಲು ದರ ಏರಿಕೆ: ಯಾವ ಪ್ಯಾಕೆಟ್​​ಗೆ ಎಷ್ಟು?

ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)

  • ಹಳೆಯ ಬೆಲೆ: 30 ರೂ.
  • ಹೊಸ ಬೆಲೆ: 31 ರೂ.

ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ

  • ಹಳೆಯ ಬೆಲೆ: 36 ರೂ.
  • ಹೊಸ ಬೆಲೆ: 37 ರೂ.

ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)

  • ಹಳೆಯ ಬೆಲೆ: 33 ರೂ.
  • ಹೊಸ ಬೆಲೆ: 34 ರೂ.

ಅಮುಲ್ ಗೋಲ್ಡ್ ಹಾಲು (1 ಲೀಟರ್)

  • ಹಳೆಯ ಬೆಲೆ: 65 ರೂ.
  • ಹೊಸ ಬೆಲೆ: 67 ರೂ.

ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)

  • ಹಳೆಯ ಬೆಲೆ: 24 ರೂ.
  • ಹೊಸ ಬೆಲೆ: 25 ರೂ.

ಅಮುಲ್ ಚಾಯ್ ಸ್ಪೆಷಲ್ ಹಾಲು (500 ಮಿ.ಲೀ)

  • ಹಳೆಯ ಬೆಲೆ: 31 ರೂ.
  • ಹೊಸ ಬೆಲೆ: 32 ರೂ.

ಅಮುಲ್ ತಾಜಾ ಹಾಲು (500 ಮಿ.ಲೀ)

  • ಹಳೆಯ ಬೆಲೆ: 27 ರೂ.
  • ಹೊಸ ಬೆಲೆ: 28 ರೂ.

ಅಮುಲ್ ತಾಜಾ ಹಾಲು (1 ಲೀಟರ್)

  • ಹಳೆಯ ಬೆಲೆ: 53 ರೂ.
  • ಹೊಸ ಬೆಲೆ: 55 ರೂ.

ನಿನ್ನೆಯಷ್ಟೇ (ಏಪ್ರಿಲ್ 30) ಮದರ್ ಡೈರಿ ಹಾಲಿನ ಬೆಲೆಯನ್ನು ಲೀಟರ್​​ಗೆ 2 ರೂ. ಹೆಚ್ಚಿಸಿತ್ತು. ಪರಿಷ್ಕೃತ ದರ ಏಪ್ರಿಲ್ 30 ರಿಂದಲೇ ಜಾರಿಗೆ ಬಂದಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>