March 20, 2026
WhatsApp Image 2026-02-01 at 11.04.21 AM

ವಿಟ್ಲ: ಇಡ್ಕಿದು ಗ್ರಾಮದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವಿದ್ಯಾರ್ಥಿಗೆ ಬೆತ್ತದಿಂದ ಸಿಕ್ಕಾಪಟ್ಟೆ ಥಳಿಸಿದ ಘಟನೆ ವರದಿಯಾಗಿದೆ. ಗಂಭೀರವಾಗಿ ಹಲ್ಲೆ ನಡೆಸಿದ ಶಿಕ್ಷಕ ಇಸ್ತಿಕಾರ್ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಎಂದಿನಂತೆ ಶಾಲೆಗೆ ಹೋಗಿದ್ದು ಮಧ್ಯಾಹ್ನ 2 ಗಂಟೆಗೆ ನಿಮ್ಮ ಮಗು ಇತರ ಮಕ್ಕಳಿಗೆ ತೊಂದರೆ ಮಾಡಿದ್ದು ಹಾಗೂ ಈ ವಿಚಾರವಾಗಿ ಬೈದಾಗ ಅಲ್ಲಿಯೇ ಮೂತ್ರ ಮಾಡಿಕೊಂಡಿದ್ದು ನೀವು ಬಂದು ಮಗುವನ್ನು ಕರೆದುಕೊಂಡು ಹೋಗಿ ಎಂದು ಶಾಲೆಯ ಕಚೇರಿಯಿಂದ ಕರೆ ಹೆತ್ತವರಿಗೆ ಬಂದಿದೆ. ಆಗ ಮನೆಯಲ್ಲಿ ಯಾರೂ ಇರದ ಕಾರಣ ಮಗುವನ್ನು ನೀವೇ ಆಟೋದಲ್ಲಿ ಕಳಿಸಿ ಎಂದು ಹೆತ್ತವರು ತಿಳಿಸಿದ್ದಾರೆ.

ಮನೆಗೆ ಬಂದ ಮಗು ಶಾಲೆಯಲ್ಲಿ ಅಧ್ಯಾಪಕ ಇಸ್ತಿಕಾರ್‌ ನನಗೆ ಕೈಗೆ ಬೆತ್ತದಿಂದ ಬಲವಾಗಿ ಗಂಭೀರವಾಗಿ ಹಲ್ಲೆ ಮಾಡಿದ್ದು ಹಲ್ಲೆ ಮಾಡುವ ಸಂದರ್ಭ ನಾನು ಹೆದರಿ ಮೂತ್ರ ಮಾಡಿಕೊಂಡಿರುತ್ತೇನೆ ಎಂದು ಹೇಳಿದೆ. ಆ ಪ್ರಕಾರ ಹೆತ್ತವರು ಶಾಲೆಯ ಶಿಕ್ಷಕ ಇಸ್ತಿಕಾರ್‌ಗೆ ಕರೆ ಮಾಡಿದಾಗ ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಸೂಕ್ತ ನ್ಯಾಯ ಒದಗಿಸುವಂತೆ ಮತ್ತು ವಿನಾಕಾರಣ ಗಂಭೀರವಾಗಿ ಹಲ್ಲೆ ನಡೆಸಿದ ಶಿಕ್ಷಕನ ವಿರುದ್ಧ ವಿಟ್ಲ ಪೊಲೀಸರಿಗೆ ಮತ್ತು ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಹೆತ್ತವರು ದೂರು ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.