ಮೂಡುಬಿದ್ರೆ : ಚಲಿಸುತ್ತಿದ್ದ ಖಾಸಗಿ ಬಸ್‌ನ ಬಾಗಿಲಲ್ಲಿ ನಿಂತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನಿಯಂತ್ರಣ ತಪ್ಪಿ ಬಸ್ಸಿಂದ ಬಲ್ಲೆಗೆ ಬಿದ್ದ ಘಟನೆ ಇಂದು (ಡಿ.30) ಮುಂಜಾನೆ ಮೂಡುಬಿದ್ರೆ ಸಮೀಪ ತೊಡಾರಿನ ಖಾಸಗಿ ಕಾಲೇಜು ಬಳಿ ಸಂಭವಿಸಿದೆ.
ಇತ್ತೀಚಿನ ದಿನಗಳಲ್ಲಿ ಬಸ್ಸಿನಿಂದ ಬಿದ್ದು ಮೃತಪಡುತ್ತಿರುವ ಘಟನೆ ಹೆಚ್ಚಾಗಿ ನಡೆಯುತ್ತಿವೆ. ಬಸ್ ಚಾಲಕರು, ನಿರ್ವಾಹಕರು ಎಷ್ಟೇ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷ್ಯಿಸಿ ತಮ್ಮಿಷ್ಟದಂತೆ ನಡೆದುಕೊಳ್ಳುವ ಮೂಲಕ ಯುವ ಜನಾಂಗ ಹೆಚ್ಚಿನ ಅನಾಹುತಗಳನ್ನು ತಂದೊಡ್ಡುತ್ತಿದೆ. ಇದೀಗ ನಡೆದಿರುವ ಘಟನೆಯೂ ಅಂತಹದ್ದೇ ಆಗಿದ್ದು, ಅದೃಷ್ಟವಶಾತ್ ಬಸ್ಸಿಂದ ಬಿದ್ದ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರ್ಕಾಳ-ಮೂಡುಬಿದರೆ_ಮಂಗಳೂರು ನಡೆವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ತೋಡಾರಿನ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಬರುತ್ತಿರುವ ವೇಳೆ ತನ್ನ ನಿಲ್ಧಾಣ ಬರುವ ಮನ್ನವೇ ಇಳಿಯುವ ತವಕಕದಲ್ಲಿ ಬಾಗಿಲ ಬಳಿ ಬಂದು ನಿಂತಿದ್ದ. ಈ ವೇಳೆ ರಸ್ತೆಯ ತಿರುವೊಂದರಲ್ಲಿ ನಿಯಂತ್ರಣ ಕಳೆದುಕೊಂಡ ವಿದ್ಯಾರ್ಥಿ ಬಲ್ಲೆಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಮುಖ ಪೂರ್ತಿ ರಕ್ತದ ಮಡುವಿನಲ್ಲಿ ಮುಳುಗಿತ್ತು. ಕೂಡಲೇ ಬಸ್ ನಿರ್ವಾಹಕ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸಿನಲ್ಲಿದ್ದ ಉಳಿದ ಪ್ರಯಾಣಿಕರಿಗೆ ತಕ್ಷಣವೇ ಬದಲಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಯ ಜೀವಕ್ಕೆ ಯಾವುದೇ ತೊಂ*ದರೆಯಿಲ್ಲ ಎಂದು ವೈದ್ಯರು ಪರಿಶೀಲಿಸಿ ತಿಳಿಸಿದ್ದಾರೆ. ಘಟನೆಯ ಕುರಿತು ಉಳಿದಂತೆ ಮಾಹಿತಿ ಲಭ್ಯವಾಗಬೇಕಷ್ಟೇ.