March 5, 2026
WhatsApp Image 2024-11-30 at 5.43.53 PM

ಕುಂದಾಪುರ: ವಿಶ್ವ ಪ್ರಸಿದ್ಧ ತ್ರಾಸಿ – ಮರವಂತೆ ಬೀಚ್‌ನಲ್ಲಿ ಶುಕ್ರವಾರದಿಂದ ವಿನೂತನವಾದ ಸ್ಕೈ ಡೈನಿಂಗ್‌ (ಗಗನದಲ್ಲಿ ಊಟ) ಆರಂಭಗೊಂಡಿದೆ.

ಮಂಗಳೂರಿನ ಪಣಂಬೂರು ಬಳಿಕ ಇದು ರಾಜ್ಯದ ಎರಡನೇ ಸ್ಕೈ ಡೈನಿಂಗ್‌ ತಾಣವನ್ನು ಉದ್ಘಾಟಿಸಿದ ಶಾಸಕ ಗುರುರಾಜ ಗಂಟಿಹೊಳೆ, ಈ ಹೊಟೇಲ್‌ ಆರಂಭದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗೆ ಅನುಕೂಲವಾಗಲಿದೆ ಎಂದರು.

ಇದರಲ್ಲಿ 90 – 100 ಮೀಟರ್‌ ಎತ್ತರದಲ್ಲಿ ಕುಳಿತು ಸೌಪರ್ಣಿಕಾ ನದಿ ಹಾಗೂ ಅರಬ್ಬೀ ಸಮುದ್ರವನ್ನು ವೀಕ್ಷಿಸುತ್ತಾ ತಿನಿಸನ್ನು ಸವಿಯಬಹುದು.ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಪಿ., ತ್ರಾಸಿ ಗ್ರಾ.ಪಂ. ಅಧ್ಯಕ್ಷ ಮಿಥುನ್‌ ದೇವಾಡಿಗ, ಟೀಮ್‌ ಮಂತ್ರಾಸ್‌ ಸ್ಕೈಡೈನಿಂಗ್‌ ಮಾಲಕ ಪ್ರವೇಶ್‌ ಮಂಜೇಶ್ವರ, ಪ್ರಮುಖರಾದ ರಾಕೇಶ್‌ ಅಥಾವರ್‌, ನಾರಾಯಣ ಕುಲಾಲ್‌, ರವಿರಾಜ್‌, ಗ್ರಾ.ಪಂ. ಸದಸ್ಯ ನಾಗರಾಜ ಪಟಗಾರ್‌ ಮತ್ತಿತರರಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.