March 4, 2026
WhatsApp Image 2024-05-30 at 6.03.22 PM

ಸುರತ್ಕಲ್: ರೌಡಿಶೀಟರ್ ಓರ್ವನ ಕೊಲೆಗೆ ಯತ್ನ ನಡೆಸಿರುವ ಘಟನೆ ಸುರತ್ಕಲ್ ಬಳಿಯ ಕುಳಾಯಿ ಬಾರ್ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ.ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೋಜ್ ಕೋಡಿಕೆರೆ ಗ್ಯಾಂಗ್ ನವರು ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೀಡಾದ ಕೋಡಿಕೆರೆ ನಿವಾಸಿ ಭರತ್ ಶೆಟ್ಟಿ (32) ಸುರತ್ಕಲ್ ಠಾಣೆಗೆ ದೂರು ನೀಡಿದ್ದಾನೆ.

ಭರತ್ ಶೆಟ್ಟಿ ಸುರತ್ಕಲ್ ಮತ್ತು ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಆರೋಪಿಯಾಗಿದ್ದು, ರೌಡಿ ಶೀಟರ್ ಆಗಿದ್ದು, ಕೋಡಿಕೆರೆ ಗ್ಯಾಂಗಿನಲ್ಲೇ ಇದ್ದ ಭರತ್ ಶೆಟ್ಟಿಗೆ ಗ್ಯಾಂಗ್ ಲೀಡರ್ ಮನೋಜ್ ಕೋಡಿಕೆರೆ ಜೊತೆ ವೈಮನಸ್ಸು ಉಂಟಾಗಿತ್ತು. ನಿನ್ನೆ ರಾತ್ರಿ ಕುಳಾಯಿ ಬಳಿ ನಿಂತಿದ್ದಾಗ, ಕಾರಿನಲ್ಲಿ ಬಂದಿದ್ದ ಕೋಡಿಕೆರೆ ಗ್ಯಾಂಗಿನ ಚೇತು, ಗುಜ್ಜೆ ಶೈಲು, ರಾಜು ಫರಂಗಿಪೇಟೆ, ಕಿಶನ್ ಕೋಡಿಕೆರೆ ಎಂಬವರು ತನ್ನ ಮೇಲೆ ತಲವಾರಿನಲ್ಲಿ ದಾಳಿ ನಡೆಸಿದ್ದಾರೆ ಎಂದು ಭರತ್ ಶೆಟ್ಟಿ ದೂರಿದ್ದಾರೆ.

ಘಟನೆಯಲ್ಲಿ ಭರತ್ ಶೆಟ್ಟಿ ಕೈ ಬೆರಳು ತುಂಡಾಗಿದ್ದು, ಅಪಾಯ ಅರಿತು ಅಲ್ಲಿಂದ ತಪ್ಪಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.