

ಉಡುಪಿ: ಉಡುಪಿಯ ಕೊಡವೂರಿನಿಂದ ಕಾಣೆಯಾಗಿದ್ದ ಜೋಡಿ ಜೀನಾ ಮರಿಲ್ ಮತ್ತು ಮುಹಮ್ಮದ್ ಅಕ್ರಂ ಮದುವೆಗಾಗಿ ಉಡುಪಿಯ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗಿ ಉಡುಪಿ ಎಸ್ಟಿ ಡಾ.ಅರುಣ್ ತಿಳಿಸಿದ್ದಾರೆ.
ತಮ್ಮಮಗಳನ್ನು ಕಿಡ್ನಾಪ್ ಮಾಡಿದ್ದಾಗಿ ಜೀನಾ ಪೋಷಕರು ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಈ ಜೋಡಿ ಪೊಲೀಸ್ ರಕ್ಷಣೆಗೆ ಪತ್ರ. ಬರೆದು ನಾವಿಬ್ಬರೂ ಪ್ರೌಢರಿದ್ದೇವೆ ಎಂದು ಹೇಳಿದ್ದರು.
ಇದೇ ವೇಳೆ ಪೋಷಕರು ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ಗೆ ಜೋಡಿಯ ಪರ ಪಕೀಲರು ಏಪ್ರಿಲ್ 4ರಂದು ಇಬ್ಬರನ್ನೂ ಹಾಜರು ಪಡಿಸುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಕಾಣೆಯಾದ ಪ್ರೇಮಿಗಳು. ಅದೇ ದಿನ ಹೈಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.