March 12, 2026
WhatsApp Image 2024-03-30 at 5.40.15 PM

ಸುಳ್ಯ: ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಂಧಿಸಿ, ಸೊತ್ತುಗಳನ್ನು ಸುಳ್ಯ ಕಸಬಾ ಗ್ರಾಮದ ಶಾಂತಿನಗರದಲ್ಲಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ. ಸ್ಥಳದ ಮಾಲಕ ಕೆ.ವೆಂಕಪ್ಪ ನಾಯ್ಕ ಶಾಂತಿನಗರ, ಮರದ ವ್ಯಾಪಾರಿ ಹಳೆಗೇಟಿನ ರಿಫಾಯಿ ಬಿನ್ ಕುಂಞಪ್ಪ, ಕ್ರೇನ್‌ ಚಾಲಕ ಈಶ್ವರ್ ನಾಯ್ಕ ಜಯನಗರ, ಲಾರಿ ಚಾಲಕ ಹಾಸನದ ಚಂದ್ರೇಗೌಡ ಬಂಧಿತರು. ಆರೋಪಿಗಳಿಂದ ಮರ ಸಾಗಾಟ ಮಾಡಲು ಬಳಸಿದ ಲಾರಿ, ಕ್ರೇನ್ ಹಾಗೂ 7.946 ಘ.ಮೀ.ಮರವನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ವೇಳೆ ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸೌಮ್ಯಾ ಪಿ.ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.