ವಿಟ್ಲ : ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲ ಸಮೀಪ ಕುದ್ದುಪದವು ನಲ್ಲಿ ನಡೆದಿದೆ.
ನವೀನ್ ಕಿಶೋರ್ ಮೃತ ಯುವಕ ನವೀನ್ ಕಿಶೋರ್ ಅವರು ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಯುಟ್ಯೂಬ್ ಚಾನೆಲ್ ಗೆ ಜಾಹೀರಾತು ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಜ.29ರ ಸಂಜೆ ಮನೆಗೆ ಹೋದವರು ರಾತ್ರಿ ಶೌಚಾಲಯಕ್ಕೆ ಹೋದವರು ಅಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಅವರ ಸಹೋದರ ಎಚ್ಚರಗೊಂಡಾಗ ನವೀನ್ ಕಿಶೋರ್ ಅವರು ಶೌಚಾಲಯದಲ್ಲಿ ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಂದಿ ಮತ್ತು ಸ್ಥಳೀಯರು ಸೇರಿ ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನವೀನ್ ಕಿಶೋರ್ ಆಗಲೇ ಮೃತಪಟ್ಟಿದ್ದರು. ಮೃತರು ತಾಯಿ ಸಹೋದರ ಮತ್ತು ಸಹೋದರಿಯರನ್ನು ಅಗಲಿದ್ದಾರೆ.