March 20, 2026
WhatsApp Image 2025-05-29 at 9.13.28 AM

ಮೂಡಬಿದಿರೆ: ಇರುವೈಲ್ ನ ಬಂಗಾರ್ ಗುಡ್ಡೆಯಲ್ಲಿ ಬುಧವಾರ ಬೆಳಿಗ್ಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಲಿಲ್ಲಿ ಡಿಸೋಜಾ (55) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೆಸ್ಕಾಂ ವಿರುದ್ದ ಘೋಷಣೆ ಕೂಗಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.

ಲಿಲ್ಲಿ ಡಿಸೋಜಾ ಮನೆ ಹತ್ತಿರದ ವಿದ್ಯುತ್ ಕಂಬದ ತಂತಿ ಮಂಗಳವಾರ ರಾತ್ರಿ ತುಂಡಾಗಿ ಮನೆಯ ಕೊಟ್ಟಿಗೆಯ ಒಳಗೆ ಬಿದ್ದಿತ್ತು. ಬೆಳಿಗ್ಗೆ ಕೊಟ್ಟಿಗೆಗೆ ಬಂದ ಲಿಲ್ಲಿ ಅವರು ಅದನ್ನು ತುಳಿದರೆನ್ನಲಾಗಿದೆ. ಮಂಗಳವಾರ ರಾತ್ರಿ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮೆಸ್ಕಾಂಗೆ ತಿಳಿಸಿದರೂ ಸ್ಥಳಕ್ಕೆ ಬರಲಿಲ್ಲ ಎಂದು ಸ್ಥಳೀಯರು ದೂರಿದರು. ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃತರ ಕುಟುಂಬಕ್ಕೆ ರೂ 5 ಲಕ್ಷ ಪರಿಹಾರ ನೀಡುವುದಾಗಿ ಮೆಸ್ಕಾಂ ಸಹಾಯಕ ಎಂಜಿನಿಯರ್ ಮೋಹನ್ ತಿಳಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.