

ಕಾರ್ಕಳ: ಕಳೆದ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದು, ನಂತರ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಬರೆದಿದ್ದರೂ ಅನುತ್ತೀರ್ಣಗೊಂಡ ಕಾರಣ ಜೀವನದಲ್ಲಿ ಜಿಗುಪ್ಪೆಗೊಂಡು ವಿದ್ಯಾರ್ಥಿ ತೇಜಸ್ (17 )ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜಿಕಾರಿನಲ್ಲಿ ಸಂಭವಿಸಿದೆ.
ಕಳೆದ ವರ್ಷ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಮತ್ತು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಜಿಗುಪ್ಪೆಗೊಂಡ ವಿದ್ಯಾರ್ಥಿ ತೇಜಸ್ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ತಂದೆ ರಮೇಶ ಮಂಜರಬೆಟ್ಟು ಅವರು ನೀಡಿದ ದೂರಿನಂತೆ ಅಜಿಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.