ಉಡುಪಿ: ಡಿ.31ರಂದು ಶ್ರೀಕೃಷ್ಣನಿಗೆ ವಿಷ್ಣು ಸಹಸ್ರ ನಾಮಾವಳಿ ಪಠನೆ ಸಹಿತ “ಕೋಟಿ ತುಳಸಿಯ ಅರ್ಪಣೆ ಅರ್ಚನೆ”

ಜಗದೊಡೆಯ ರುಕ್ಮಿಣೀ ಲೋಲ ಶ್ರೀಮಧ್ವಮುನಿಪ್ರತಿಷ್ಠಿತ ಭಾವಿಸಮೀರ ಶ್ರೀವಾದಿರಾಜಾದಿ ಮುನಿ ಪುಂಗವ ಸಂಸೇವಿತ ಶ್ರೀಕೃಷ್ಣನ ಪರಮ ಪದತಲಗಳಿಗೆ ವಿಪ್ರ ಬಂಧುಗಳಿಂದ ವಿಷ್ಣು ಸಹಸ್ರ ನಾಮಾವಳಿ ಪಠನೆ ಸಹಿತ “ಕೋಟಿ ತುಳಸಿಯ ಅರ್ಪಣೆ …ಅರ್ಚನೆ ” ಯ ದಿವ್ಯ ಸಂಕಲ್ಪವನ್ನು ಪರ್ಯಾಯ ಮಠಾಧೀಶರಾದ ಶ್ರೀ ಕೃಷ್ಣಾಪುರ ಮಠದ ಶ್ರೀಶ್ರೀವಿದ್ಯಾಸಾಗರತೀರ್ಥಶ್ರೀಪಾದರ ಆಶ್ರಯ ಹಾಗೂ ಆಶೀರ್ವಾದದ ಮೇರೆಗೆ “ಮಾಸಾನಾಂ ಮಾರ್ಗಶೀರ್ಷೋ ಹಂ” ಎನ್ನುವ ಗೀತೋಕ್ತಿಯಂತೆ ಮಾರ್ಗಶಿರ ಮಾಸದ ಬಹುಳ ಚತುರ್ಥಿ ದಿನಾಂಕ 31-12-2023 ರವಿವಾರದಂದು ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ರಿ.) ಅಂಗ ಸಂಸ್ಥೆ ಕಡಿಯಾಳಿ, ಊರ ಪರವೂರ ಬ್ರಾಹ್ಮಣ ವಲಯ , ಹಾಗೂ ತುಶಿಮಾಮದ ಇತರ ಅಂಗ ಸಂಸ್ಥೆ ಮತ್ತು ಬ್ರಾಹ್ಮಣ ಸಮುದಾಯದ ಸಹಕಾರದೊಂದಿಗೆ ನಡೆಯಲಿದೆ.

ಜನವರಿ 22, 2024 ರ ವಿಶೇಷ ದಿನದಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು ಈ ದಿವ್ಯ ಕೈಂಕರ್ಯ ನಿರ್ವಿಘ್ನವಾಗಿ ನಡೆದು ಲೋಕ ಕಲ್ಯಾಣಕ್ಕೆ ನಾಂದಿಯಾಗಿ ನಮ್ಮೀ ರಾಷ್ಟ್ರ ವಿಶ್ವ ಶ್ರೇಷ್ಟ ವೆನಿಸಲಿ ಎಂಬ ಆಶಯದೊಂದಿಗೆ ಬ್ರಾಹ್ಮಣ ವರ್ಗಕ್ಕೆ ಸಮಾಜದಲ್ಲಿ ಸ್ಥಾನ – ಮಾನ, ಗೌರವಗಳು ವೃದ್ಧಿಸಲಿ ಹಾಗೂ ಮರ್ಯಾದಾಪುರುಷೊತ್ತಮ ಶ್ರೀರಾಮನ ಆದರ್ಶಗಳು ನೆಲೆ ನಿಲ್ಲಲಿ ಎಂಬ ಸದುದ್ದೇಶದೊಂದಿಗೆ ಈ ಅರ್ಚನೆಯು ನಡೆಯಲಿದೆ.
ಅರ್ಚನೆಯ ದಿನ – ಮುಂಜಾನೆ 7.30 ಕ್ಕೆ ಮೆರವಣಿಗೆಯ ಮೂಲಕ ಶ್ರೀ ಕೃಷ್ಣನ ಮೂರ್ತಿಯನ್ನು ತಂದು ರಾಜಾಂಗಣದ ಪ್ರಷ್ಪಾಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪರ್ಯಾಯ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಎರಡಾವರ್ತಿಯ ವಿಷ್ಣು ಸಹಸ್ರ ನಾಮಾವಳಿಯ ನಂತರ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ನಂತರ ಎರಡಾವರ್ತಿಯ ಪಠಣ ಮುಗಿದ ಮೇಲೆ ಮಹಾಮಂಗಳಾರತಿಯ ನಂತರ ಮಧ್ಯಾಹ್ನ 12 ಗಂಟೆಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಈ ಪುಷ್ಪಾಲಂಕೃತ ಮಂಟಪದಲ್ಲಿ ಅಷ್ಟ ಮಠದ ಯತಿವರ್ಯರು ಈ
ತುಳಸಿ ಅರ್ಚನೆಯನ್ನು ನೆರವೇರಿಸಲಿರುವರು.

ಈ ಸಂದರ್ಭದಲ್ಲಿ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸೋಣ.

* ಭಾಗವಹಿಸುವ ವಿಪ್ರ ಶ್ರೇಷ್ಟರು ಬ್ರಹ್ಮ ವಸ್ತ್ರವನ್ನು ಧರಿಸಬೇಕು
* ಸಮಯಕ್ಕೆ ಪ್ರಾಶಸ್ತ್ಯ ನೀಡಿ ಕೋಟಿ ಅರ್ಚನೆಯ ಗುರಿ ತಲುಪೋಣ.
* 2500 ರ ಗಡಿ ದಾಟುವ ನಿಟ್ಟಿನಲ್ಲಿ ಎಲ್ಲ ವಿಪ್ರ ಬಂಧುಗಳನ್ನು ಒಂದಾಗಿಸಿ ಒಕ್ಕೊರಲಿನಲ್ಲಿ ನಾಮಾವಳಿ ಪಠಿಸಿ ಬಂಧುತ್ವ ಮೆರೆಯೋಣ.
* ದೊಡ್ಡ ಸಂಖ್ಯೆಯಲ್ಲಿ ಬನ್ನಿ. ಹಿಡಿತುಂಬ ತುಳಿಸಿ ತನ್ನಿ..

* ಮಹಿಳೆಯರು ಮುನ್ನಾದಿನ ಅಪರಾಹ್ಮ ಹಾಗೂ ಆ ದಿನ ಲಕ್ಷ್ಮೀ ಶೋಭಾನೆಯ ಪಠಣದೊಂದಿಗೆ ಸಂಗ್ರಹಿಸಿದ ತುಳಸಿಯನ್ನು ನಿರ್ಮಲೀಕರಿಸ ಬೇಕು.
* ನಾಮಾವಳಿಯ ಸಮಯದಲ್ಲಿ ಶಿಸ್ತು ಪರಿಪಾಲನೆ ಅಗತ್ಯ.

* ನಿಮ್ಮ ತನು, ಮನ, ಧನದ ಸಂಪೂರ್ಣ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ನಾಂದಿ.

ನೀವೂ ಬನ್ನಿ – ನಿಮ್ಮವರೆಲ್ಲರನ್ನೂ ಕರೆತನ್ನಿ.. ಶ್ರೀ ಕೃಷ್ಣನಿಗೆ ಜಯ ಜಯವೆನ್ನಿ.

ಈ ವರ್ಷದ ಕೊನೆಯ ದಿನವನ್ನು ಜಗದೊಡೆಯ ಶ್ರೀಕೃಷ್ಣನಿಗಾಗಿ ಮೀಸಲಿಡೋಣ.

ನಿಮ್ಮೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುವ ತುಶಿಮಾ ಮ ಕಡಿಯಾಳಿ ಅಂಗಸಂಸ್ಥೆಯ
ರಘುಪತಿ ಉಪಾಧ್ಯ :ಅಧ್ಯಕ್ಷರು
ರಾಜೇಶ್ ಭಟ್ ಪಣಿಯಾಡಿ :ಕಾರ್ಯದರ್ಶಿ :
ಕೃಷ್ಣಮೂರ್ತಿ ಆಚಾರ್ಯ :ಕೋಶಾಧಿಕಾರಿ
ಉಪಸ್ಥಿತಿ:
ಕಾರ್ಯಾಧ್ಯಕ್ಷರು: ಪ್ರದೀಪ್ ಕುಮಾರ್ ಕಲ್ಕೂರ
ಗೌರವ ಅಧ್ಯಕ್ಷರು : ಅರವಿಂದ ಆಚಾರ್ಯ
ಗೌರವ ಸಲಹೆಗಾರರು : ರಂಜನ್ ಕಲ್ಕೂರ್
ಶ್ರೀಶ ಕಡೆಕಾರ್

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.