
ಮಂಗಳೂರು: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಂಬಳಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 27-11-2025 ರಂದು ಅಪರಾಹ್ನ 2.30 ಕ್ಕೆ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು.

ಈ ವೇಳೆ ಸದಸ್ಯರಾದ ನವಾಜ್.ಕೆ.ಬಿ.ಆರ್ ಅವರು, ಮಂಗಳೂರಿನಿಂದ ಉಳಾಯಿಬೆಟ್ಟು-ಸಂಕುಮಾಡು-ಮೂಡುಜೆಪ್ಪು ಮಾರ್ಗವಾಗಿ ಹಾದುಹೋಗುವ ಹೊಸ ಸರಕಾರಿ ಬಸ್ಸು ಶೀಘ್ರದಲ್ಲಿ ಪ್ರಾರಂಭಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಶ್ರೀಮತಿ ನಿರ್ಮಲ, ಕೆಎಸ್ ಆರ್ ಟಿಸಿ ವ್ಯವಸ್ಥಾಪಕರು, ಸದ್ರಿ ಪ್ರದೇಶಕ್ಕೆ ಹೊಸದಾಗಿ ಬಸ್ಸು ವ್ಯವಸ್ಥೆಗೆ ಆರ್ ಟಿ ಓ ಕಚೇರಿಗೆ ಪರ್ಮೀಟ್ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಬಂದ ಕೂಡಲೇ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯತ್ ಸಹಾಯಕ ಲೆಕ್ಕಧಿಕಾರಿ ಶ್ರೀ ಪರಮೇಶ್ವರ ಇವರು ಸಮಿತಿಯ ಸದಸ್ಯರು ಹಾಗೂ ಇಲಾಖಾ ಅಧಿಕಾರಿಗಳಿಗೆ ಸ್ವಾಗತಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯರಾದ ಅಲ್ ಸ್ಟನ್ ಡಿ ಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ, ಪ್ರಶಾಂತ್ ಎಸ್, ನವಾಜ್, ಶೈಲಾ ನೀತಾ ಡಿ ಸೋಜಾ, , ರಿತೇಶ್ ಅಂಚನ್, ರಫೀಕ್, ವಿದ್ಯಾ, ಶ್ರೀಧರ ಪಂಜ , ಮೊಹಮ್ಮದ್ ಮುಸ್ತಾಪ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ತಾಲೂಕು ಪಂಚಾಯತ್ ವ್ಯವಸ್ಥಾಪಕರು ಶ್ರೀಮತಿ ಸುವರ್ಣಾ ಹೆಗಡೆ, ಹಾಗೂ ತಾಲೂಕು ಐಇಸಿ ಸಂಯೋಜಕರಾದ ಶ್ರೀಮತಿ ನಿಶ್ಮಿತ ಬಿ ಹಾಜರಿದ್ದರು.
