ಮಂಗಳೂರು : ಫೇಸ್ ಬುಕ್ ನಲ್ಲಿ ಸಿಕ್ಕ ‘ಫ್ರೆಂಡಿ’ನ ಮೋಹಕ್ಕೆ ಮಂಗಳೂರಿನ ವ್ಯಕ್ತಿಯೋರ್ವ ಬರೋಬ್ಬರಿ 56 ಲಕ್ಷ ರೂಪಾಯಿ ಕಳಕೊಂಡಿದ್ದು ಇದೀಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಕದ ತಟ್ಟಿದ್ದಾರೆ.
ದೂರುದಾರರ ವ್ಯಕ್ತಿ ಫೇಸ್‌ಬುಕ್ ಅಕೌಂಟ್‌ಗೆ ಜುಲೈ ತಿಂಗಳಿನಲ್ಲಿ ಅದಿತಿ ಕಪೂರ್ ಎಂಬ ಹೆಸರಿನ ಮಹಿಳೆಯೊಬ್ಬರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು. ದೂರುದಾರರು ಅದಕ್ಕೆ ಸ್ವೀಕೃತಿ ನೀಡಿ ಮೆಸೆಂಜರ್ ಮೂಲಕ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದರು. ಕೆಲ ಸಮಯದ ಅನಂತರ ಮಹಿಳೆ ದೂರುದಾರರಿಗೆ ಹೂಡಿಕೆಯ ಪ್ಲಾನ್ ಉಂಟು ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ ನೀವೂ ಹೂಡಿಕೆ ಮಾಡಿ ಒಳ್ಳೆ ಯ ರಿಟರ್ನ್ಸ್ ಬರುತ್ತೆ ಅಂತ ಸಿಹಿ ಮಾತುಗಳಿಂದ ಆಸೆ ಹುಟ್ಟಿಸಿದ್ದಾರೆ. ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾಳೆ. ಅನಂತರ ಲಿಂಕ್ ಕಳುಹಿಸಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದ್ದಾಳೆ. ರಿಜಿಸ್ಟ್ರೇಷನ್ ಮಾಡಿಸಿಕೊಂಡ ವ್ಯಕ್ತಿ ಬಳಿಕ ಮಹಿಳೆ ಹೇಳಿದಂತೆ ಅದಕ್ಕೆ ಹಣ ವರ್ಗಾವಣೆ ಮಾಡಿದ್ದು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಬರೋಬ್ಬರಿ ಒಟ್ಟು 56,64,000 ರೂ.ಗಳನ್ನು ವರ್ಗಾವಣೆ ಮಾಡಿ ದ್ದಾರೆ. ಕೆಲ ಸಮಯದ ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ಮುಂದಾದಾಗಲೇ ಗೊತ್ತಾಯ್ತು ತಾನು ಮಹಿಳೆಯಿಂದ ವಂಚನೆಗೊಳಗಾಗಿದ್ದೇನೆ ಎಂದು. ಇದೀಗ ವಂಚನೆಗೊಳಗಾದ ವ್ಯಕ್ತಿ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.