ಮಂಗಳೂರು: ಮನೆಗೆ ನುಗ್ಗಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬಿಜೈ ನ್ಯೂರೋಡ್‌ನ‌ ಸಂಕೈಗುಡ್ಡದಲ್ಲಿ ನಡೆದಿದೆ.

ನ.24ರ ರಾತ್ರಿ 11.30ರಿಂದ ನ.25ರ ಬೆಳಗ್ಗೆ 6 ಗಂಟೆಯ ನಡುವೆ  ಈ ಘಟನೆ ನಡೆದಿದ್ದು,  ಮನೆಯ ಬೆಡ್‌ರೂಂನ ಕಿಟಕಿಯ ಗ್ರಿಲ್ಸ್‌ನ್ನು ತುಂಡರಿಸಿ ಕಳ್ಳರು ಮನೆ ಪ್ರವೇಶಿಸಿದ್ದಾರೆ.

ಬೆಡ್‌ರೂಂ ಕಪಾಟಿನಲ್ಲಿದ್ದ ಅಂದಾಜು 16 ಗ್ರಾಂ ತೂಕದ ಒಂದು ಜತೆ ಕಿವಿಯ ಓಲೆ, 144 ಗ್ರಾಂ ತೂಕದ 4 ಚಿನ್ನದ ನೆಕ್ಲೆಸ್‌, 40 ಗ್ರಾಂ ತೂಕದ ಚಿನ್ನದ ಸರ, 48 ಗ್ರಾಂ ತೂಕದ ಚಿನ್ನದ ಹಾರ, 24 ಗ್ರಾಂ ತೂಕದ ಹವಳದ ಸರ, 40 ಗ್ರಾಂ ತೂಕದ ಚಿನ್ನದ ಸರ ಮತ್ತು 36 ಗ್ರಾಂ ತೂಕದ ಚಿನ್ನದ ನೆಕ್ಲೆಸ್‌ ಕದ್ದಿದ್ದಾರೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

Check Also

ಮಂಗಳೂರು: ಸ್ಕಿಡ್ಡಾಗಿ ಬಿದ್ದ ಸ್ಕೂಟರ್ – ಯುವಕ ಮೃತ್ಯು…!!

ಮಂಗಳೂರು: ನಗರದ ಸಮೀಪ ಯುವಕ ಚಲಾಯಿಸುತ್ತಿದ್ದ ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಯುವಕ …

Leave a Reply

Your email address will not be published. Required fields are marked *

You cannot copy content of this page.