ಉಪ್ಪಿನಂಗಡಿ: 500 ರೂ. ಟಿಕೆಟ್ ಖರೀದಿಸಿದ್ದ ಮೇಸ್ತ್ರಿಗೆ ಒಲಿದ 50 ಲಕ್ಷ ಬಂಪರ್ ಕೇರಳ ಲಾಟರಿ

ಉಪ್ಪಿನಂಗಡಿಯ ಮೇಸ್ತ್ರಿಯೊಬ್ಬರಿಗೆ ಕೇರಳ ಅದೃಷ್ಟ ಲಾಟರಿ ಒಲಿದಿದೆ. ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವವರು 500 ರೂಪಾಯಿಯ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಟಿಕೆಟ್‌ ಗೆ ಈಗ 50ಲಕ್ಷ ಬಹುಮಾನ ಸಿಕ್ಕಿದೆ.

ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಚಂದ್ರಯ್ಯ ಟಿಕೆಟ್ ಖರೀದಿಸಿದ್ದರು. ಸೆ.20ರಂದು ಓಣಂ ಲಾಟರಿ ಡ್ರಾ ಆಗಿದ್ದು, ಮೇಸ್ತ್ರಿ ಚಂದ್ರಯ್ಯ ಬಂಪರ್ ಬಹುಮಾನ ಗೆದ್ದಿದ್ದಾರೆ. ಈ ಹಿಂದೆ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿಗೆ 80 ಲಕ್ಷ ಬಹುಮಾನ ಬಂದಿತ್ತು. ಆನಂದ ಟೈಲರ್ ಎಂಬವರು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಈ ಹಿಂದೆ ಬಹುಮಾನ ಗೆದ್ದಿದ್ದರು. ಇದೀಗ ಎರಡನೇ ಬಾರಿಗೆ ಉಪ್ಪಿನಂಗಡಿಯ ಚಂದ್ರಯ್ಯ ಅವರಿಗೆ ಅದೃಷ್ಟ ಒಲಿದೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.