March 20, 2026
WhatsApp Image 2024-04-28 at 8.34.27 AM

ಪುತ್ತೂರು: ಬೃಹತ್ ಗಾತ್ರದ ಮಾವಿನ ಮರವೊಂದು ಏಕಾಏಕಿ ಧರೆಗುರುಳಿ ಬಿದ್ದು ಹಲವು ವಾಹನಗಳು ಜಖಂಗೊಂಡ ಘಟನೆ ದಕ್ಷಿಣ ಕನ್ನಡ ಜುಇಲ್ಲೆಯ ಪುತ್ತೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

ಪುತ್ತೂರಿನ ಬೊಳ್ವಾರ್ ಹರಿಪ್ರಸಾದ್ ಹೊಟೇಲ್ ಬಳಿ ಈ ಘಟನೆ ನಡೆದಿದ್ದು ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಬೃಹತ್ ಮರಬಿದ್ದ ಪರಿಣಾಮ ತಮ್ಮ ವಾಹನವನ್ನ ಹೊರತರಲು ವಾಹನ ಮಾಲಿಕರು ಪರದಾಡಿದರೆ, ಬಿದ್ದ ಮರದ ಮಾವಿನ ಮಿಡಿ ಕೊಯ್ಯಲಯ ಜನ ಮುಗಿಬಿದ್ದಿದ್ದರು. ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ಭಾರೀ ಅವಘಡ ತಪ್ಪಿದ್ದು ಮರದ ಕೊಂಬೆಗಳನ್ನು ಸ್ಥಳೀಯರ ನೆವಿನಿಂದ ತೆರವು ಮಾಡುವ ಕಾರ್ಯ ನಡೆಯುತ್ತಿದೆ.

 

About The Author

Leave a Reply

Your email address will not be published. Required fields are marked *

You cannot copy content of this page.