March 12, 2026
WhatsApp Image 2025-11-25 at 3.54.43 PM

ನ. 28ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಕೆಲವೊಂದು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೊರಡಿಸಿದೆ.

* ರೋಡ್ ಶೋ ಕಾರ್ಯಕ್ರಮಕ್ಕೆ ಬರುವವರು ಬೆಳಗ್ಗೆ 10.30ರ ಒಳಗಾಗಿ ಆಗಮಿಸಿ ನಿಗದಿತ ಸ್ಥಳ ಸೇರಬೇಕು. ತಡವಾಗಿ ಬಂದವರಿಗೆ ನಿರ್ಬಂಧ ವಿಧಿಸಲಾಗುತ್ತದೆ.

* ರೋಡ್ ಶೋ ಮಾರ್ಗದ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಪೊಲೀಸ್ ಬ್ಯಾರಿಕೇಡ್ ದಾಟಬಾರದು.

* ರೋಡ್ ಶೋ ಮಾರ್ಗದಲ್ಲಿ ನೀರಿನ ಬಾಟಲ್, ಬ್ಯಾಗ್‌ಗಳು, ಹೂವಿನ ಬೊಕ್ಕೆ, ನೆನಪಿನ ಕಾಣಿಕೆ, ಕ್ಯಾಮರಾ, ಬಾಕ್ಸ್ಗಳು, ಯಾವುದೇ ಹರಿತವಾದ ಆಯುಧಗಳು, ಚಾಕು, ಬೆಂಕಿ ಸಾಮಾಗ್ರಿಗಳು, ಡ್ರೋನ್‌ಗಳು, ಸ್ಫೋಟಕ ವಸ್ತುಗಳು, ಲೇಸರ್ ಲೈಟ್, ಧ್ವಜ ಕಂಬ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

*  ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗುವುದು.

*  ರೋಡ್ ಶೋ ಮಾರ್ಗದ ಯಾವುದೇ ಕಟ್ಟಡದ ಮೇಲೆ ಹತ್ತಬಾರದು

* ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ ಸಹಕರಿಸಬೇಕು. 3 ವರ್ಷದೊಳಗಿನ ಮಕ್ಕಳನ್ನು ಕರೆ ತರಬಾರದು.

* ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. * ಹೆಚ್ಚುವರಿ ಯಾವುದೇ ಧ್ವಜ ಚಿತ್ರಪಟ ತರಕೂಡದು.

* ಸಾರ್ವಜನಿಕರು ಯಾವುದೇ ಉದ್ವೇಗಕ್ಕೆ ಒಳಗಾಗಿ, ನೂಕುನುಗ್ಗಲು ಮಾಡಬಾರದು. * ಎಲ್ಲಾ ಸಂದರ್ಭದಲ್ಲಿ ಪೊಲೀಸರೊಂದಿಗೆ ತಾಳ್ಮಯಿಂದ ಸಹಕರಿಸಬೇಕು.

About The Author

Leave a Reply

Your email address will not be published. Required fields are marked *

You cannot copy content of this page.