
ಕಡಬ: ಪತ್ನಿ ತನ್ನ ಗೆಳೆಯನ ಜೊತೆ ಮೊಬೈಲ್ ಸಂಪರ್ಕದಲ್ಲಿ ಇದ್ದಾಳೆಂದು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದ ಗ್ಯಾರೇಜ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಕುಟ್ರುಪ್ಪಾಡಿ ನಿವಾಸಿ ರಾಕೇಶ್(36) ಎಂಬವರೇ ಮೃತ ದುರ್ದೈವಿ. ರಾಕೇಶ್ ಅವರು ಕಳಾರದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ಹೊಂದಿದ್ದರು.
ರಾಕೇಶ್ ಅವರ ಪತ್ನಿಯ ಜೊತೆಗೆ ಅವರ ಸ್ನೇಹಿತ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ವಿಷಯ ಅವರ ಗಮನಕ್ಕೆ ಬಂದಿತ್ತು. ಈ ವಿಚಾರವಾಗಿ ತೀವ್ರವಾಗಿ ನೊಂದಿದ್ದ ಅವರು ಅಮಲು ಪದಾರ್ಥದ ಜೊತೆಗೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಸ್ಥಳೀಯರು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ತಂದೆ ಸೊಲೊಮನ್ ಎಂಬವರು ನೀಡಿದ ದೂರಿನನ್ವಯ ಕಡಬ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
