ಬೆಳ್ತಂಗಡಿ: 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದಿದೆ.
ಕಳೆಂಜ ಗ್ರಾಮದ ಕಾರ್ಯತ್ತಡ್ಕ ನಿವಾಸಿ ವೆಂಕಪ್ಪ ಗೌಡರ ಪತ್ನಿ ಜಯಶ್ರೀ (29) ಹಾಗೂ ನವರ ಪುತ್ರಿ ರುಷಿಕಾ( 9 ತಿಂಗಳು) ನಾಪತ್ತೆಯಾದವರು. ಮಾ.22 ರಂದು ರಾತ್ರಿ ಜಯಶ್ರೀ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದರು. ಮರುದಿನ ಬೆಳಿಗ್ಗೆ ವೆಂಕಪ್ಪಗೌಡರು ಎದ್ದು ನೋಡಿದಾಗ ಪತ್ನಿ ಹಾಗೂ 9 ತಿಂಗಳ ಮಗು ರುಷಿಕಾ ನಾಪತ್ತೆಯಾಗಿದ್ದರೆನ್ನಲಾಗಿದೆ.
ಈ ಬಗ್ಗೆ ವೆಂಕಪ್ಪಗೌಡ ಕೊಟ್ಟ ದೂರಿನಂತೆ ಧರ್ಮಸ್ಥಳ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.