February 27, 2026
WhatsApp Image 2026-02-27 at 1.11.00 PM

ಮಂಗಳೂರು : ಚೈನ್ ಲಿಂಕ್ ಹೆಸರಿನಲ್ಲಿ ವಂಚನೆ ಎಸಲಾಗಿದೆ. ಉದ್ಯೋಗ ನೀಡುತ್ತೇವೆ ಎಂದು ಹೇಳಿ ನೂರಾರು ವಿದ್ಯಾರ್ಥಿಗಳಿಗೆ ಇದೀಗ ವಂಚನೆಗೆ ಒಳಗಾಗಿದ್ದಾರೆ. ಮಹಾರಾಷ್ಟ್ರ ಮೂಲದ ವೆಕ್ಸಾನ್ ಹೆಸರಿನ ಕಂಪನಿಯಿಂದ ಈ ಒಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

BMP PVT LTD ಕಂಪನಿ ಹೆಸರಿನಲ್ಲಿ ಜಾಹೀರಾತು ನೀಡಿ ವಂಚನೆ ಎಸಲಾಗಿದೆ. ವಂಚನೆ ವಿಚಾರ ತಿಳಿದು ಪೊಲೀಸರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಕಂಪನಿ ಹಾಗೂ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಮ್ಮಂತೆ ಬೇರೆ ಯಾರಿಗೂ ಮೋಸ ಆಗಬಾರದು. ಬ್ಲೇಡ್ ಕಂಪನಿಯನ್ನು ಬಂದ್ ಮಾಡಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದರೂ ಕೂಡ ವೆಕ್ಸನ್ ಕಂಪನಿ ಇನ್ನೂ ಕೂಡ ಕಾರ್ಯಾಚರಣೆ ನಡೆಸುತ್ತಿದೆ. ಕುದ್ರೋಳಿ ಬಳಿಯ ಬಿರ್ವ ಕಾಂಪ್ಲೆಕ್ಸ್ ಮೂರನೇ ಫ್ಲೋರ್ನಲ್ಲಿ ಕಂಪನಿ ಕಾರ್ಯಾಚರಣೆ ನಡೆಸುತ್ತಿದೆ.

ಚೈನ್ ಲಿಂಕ್ ಕಂಪೆನಿಯ ಅವ್ಯವಹಾರ ಕುರಿತು ಮಾತಾಡಿದ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರು, “ಪದವಿ ಓದುತ್ತಿರುವ ಅಥವಾ ಮುಗಿಸಿರುವ ಯುವ ಸಮೂಹಕ್ಕೆ ಮಾಸಿಕ 30,000 ರೂಪಾಯಿಗಳ ಆಕರ್ಷಕ ವೇತನದ ಆಮಿಷವೊಡ್ಡಿ ಈ ಸಂಸ್ಥೆ ಆಹ್ವಾನಿಸುತ್ತಿತ್ತು. ಆದರೆ, ಉದ್ಯೋಗದ ಆಸೆಯೊಂದಿಗೆ ಹೋದ ಪ್ರತಿ ವಿದ್ಯಾರ್ಥಿಗಳಿಂದಲೂ ಇಂಟರ್ನ್‌ಶಿಪ್ ಶುಲ್ಕದ ನೆಪದಲ್ಲಿ ಬರೋಬ್ಬರಿ 51,000 ರೂಪಾಯಿಗಳನ್ನು ಈ ಸಂಸ್ಥೆ ವಸೂಲಿ ಮಾಡಿದೆ“ ಎಂದು ಆರೋಪಿಸಿದರು.

ಈ ವಂಚನೆ ಹೇಗೆ ನಡೆಯುತ್ತದೆ?

  • ಆಮಿಷ: “ಪಾರ್ಟ್ ಟೈಮ್ ಕೆಲಸ”, “ಕಡಿಮೆ ಹೂಡಿಕೆ – ಹೆಚ್ಚು ಲಾಭ” ಅಥವಾ “ಶ್ರೀಮಂತರಾಗಲು ಸುಲಭ ದಾರಿ” ಎಂದು ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತದೆ.

  • ಸದಸ್ಯತ್ವದ ಶುಲ್ಕ: ಆರಂಭದಲ್ಲಿ ಸಾವಿರಾರು ರೂಪಾಯಿಗಳನ್ನು ಸದಸ್ಯತ್ವದ ಹೆಸರಿನಲ್ಲಿ ಕಟ್ಟಿಸಿಕೊಳ್ಳಲಾಗುತ್ತದೆ.

  • ಚೈನ್ ಸಿಸ್ಟಮ್: ಹಣ ಹೂಡಿದ ವಿದ್ಯಾರ್ಥಿಗಳಿಗೆ ತಮ್ಮ ಕೆಳಗೆ ಮತ್ತೆ ಇಬ್ಬರು ಅಥವಾ ಮೂವರು ಹೊಸಬರನ್ನು (Downline) ಸೇರಿಸುವಂತೆ ಒತ್ತಡ ಹೇರಲಾಗುತ್ತದೆ. ಹೊಸಬರು ಸೇರಿದಾಗ ಹಳೆಯವರಿಗೆ ‘ಕಮಿಷನ್’ ನೀಡುವ ಮೂಲಕ ನಂಬಿಕೆ ಹುಟ್ಟಿಸಲಾಗುತ್ತದೆ.

  • ಮಾನಸಿಕ ಪ್ರಚೋದನೆ: ಐಷಾರಾಮಿ ಜೀವನದ ಕನಸು ತೋರಿಸಿ, ಸೆಮಿನಾರ್‌ಗಳ ಮೂಲಕ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಲಾಗುತ್ತದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಗಮನಿಸಬೇಕಾದ ಅಂಶಗಳು

  • ಕಷ್ಟವಿಲ್ಲದೆ ಹಣವಿಲ್ಲ: ಯಾವುದೇ ಶ್ರಮವಿಲ್ಲದೆ ಅಥವಾ ಕೇವಲ ಜನರನ್ನು ಸೇರಿಸುವುದರಿಂದ ಹಣ ಸಿಗುತ್ತದೆ ಎಂದರೆ ಅದು ೯೯% ವಂಚನೆಯೇ ಆಗಿರುತ್ತದೆ.

  • ಪರವಾನಗಿ ಪರಿಶೀಲಿಸಿ: ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಅದು ಆರ್‌ಬಿಐ (RBI) ಅಥವಾ ಸೆಬಿ (SEBI) ಅಡಿಯಲ್ಲಿ ನೋಂದಾಯಿತವಾಗಿದೆಯೇ ಎಂದು ಪರೀಕ್ಷಿಸಿ.

  • ಮಾಹಿತಿ ಹಂಚಿಕೊಳ್ಳಿ: ಇಂತಹ ಜಾಲಗಳ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣ ಪೋಷಕರಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ.

About The Author

Leave a Reply

Your email address will not be published. Required fields are marked *

You cannot copy content of this page.