June 2, 2025
WhatsApp Image 2023-10-26 at 5.47.35 PM

ಸುಳ್ಯ: ಹುಲಿ ಉಗುರು ಧರಿಸಿರುವ ಅರೋಪದಡಿ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾದ ಬೆನ್ನಲ್ಲೇ ಹುಲಿ ಉಗುರಿನಂತಹ ವಸ್ತುಗಳು ಧರಿಸಿರುವ ನೂರಾರು ಮಂದಿಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸುಳ್ಯ ನಗರ ಪಂಚಾಯತ್ ಉದ್ಯೋಗಿ ಶಶಿಕಲಾ ಅವರ ಪೋಟೋ ಕೂಡಾ ವೈರಲ್ ಆಗಿದೆ.

ನಗರ ಪಂಚಾಯತ್ ಸಿಬ್ಬಂದಿಗಳು ತೆಗೆಸಿಕೊಂಡಿದ್ದ ಪೋಟೋವೊಂದರಲ್ಲಿ ಇರುವ ಶಶಿಕಲಾ ಅವರ ಕೊರಳಿನಲ್ಲಿ ಹುಲಿ ಉಗುರನ್ನು ಹೋಲುವ ಲೋಕೆಟ್ ಕಂಡುಬರುತ್ತಿತ್ತು. ನಿನ್ನೆ ರಾತ್ರಿಯಿಂದ ಈ ಪೋಟೋಗಳು ಎಲ್ಲೆಡೆ ವೈರಲ್ ಆಗತೊಡಗಿತ್ತು. ಈ ಹಿನ್ನಲೆಯಲ್ಲಿ ಸುಳ್ಯ ಅರಣ್ಯ ಇಲಾಖೆಯವರು ಶಶಿಕಲಾ ಅವರನ್ನು ಸಂಪರ್ಕಿಸಿ ಕಚೇರಿಗೆ ಬರುವಂತೆ ತಿಳಿಸಿದರು.

ಶಶಿಕಲಾ ಅವರು ಆ ಲೋಕೆಟ್ನೊಂದಿಗೆ ವಲಯಾರಣ್ಯಾಧಿಕಾರಿಗಳ ಕಚೇರಿಗೆ ತೆರಳಿ ಅದನ್ನು ಅಲ್ಲಿ ಒಪ್ಪಿಸಿದ್ದಾರೆ. ಇದು ಅಸಲಿ ಹುಲಿ ಉಗುರಿನ ಲೋಕೆಟ್ ಅಲ್ಲ. ಮಾರಾಟ ಮಾಡಲು ಬಂದವರಿಂದ ನನ್ನ ತಾಯಿ ಖರೀದಿಸಿ, ಧರಿಸುತ್ತಿದ್ದರು. ನಾನು ಕೂಡಾ ಅನೇಕ ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಪೋಟೋ ವೈರಲ್ ಆದ್ದರಿಂದ ಅರಣ್ಯ ಇಲಾಖೆಯವರು ಫೋನ್ ಮಾಡಿದಾಗ ನಾನೇ ಹೋಗಿ ಲೋಕೆಟ್ ಕೊಟ್ಟು ಬಂದಿದ್ದೇನೆ ಎಂದು ಶಶಿಕಲಾ ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಶಿಕಲಾ ಅವರ ಹುಲಿ ಉಗುರು ಧರಿಸಿರುವ ಪೋಟೋ ವೈರಲ್ ಆಗಿರುವುದರಿಂದ ಅವರನ್ನು ಸಂಪರ್ಕಿಸಿದೆವು. ಅವರೇ ಕಚೇರಿಗೆ ಬಂದು ಲೋಕೆಟ್ ಕೊಟ್ಟು ಇದು ನನ್ನಲ್ಲಿ ಕೆವು ವರ್ಷದಿಂದ ಇದೆ. ಇದು ನಕಲಿ ಲೋಕೆಟ್, ಒರಿಜಿನಲ್ ಅಲ್ಲ ಎಂದು ಹೇಳಿದ್ದಾರೆ. ಲೋಕೆಟನ್ನು  ನಾವು ಪಡೆದುಕೊಂಡಿದ್ದು, ಲ್ಯಾಬ್ ನಲ್ಲಿ  ಪರೀಕ್ಷೆ ನಡೆಸುತ್ತೇವೆ. ಒರಿಜಿನಲ್ ಆಗಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>