ಮಂಗಳೂರು : ಮಂಗಳೂರು ದಸರಾದಲ್ಲಿ ಸೌಜನ್ಯಳ ಭಾವಚಿತ್ರ ಹಾಕಿದ್ದಕ್ಕೆ ನಿಷೇಧಿಸಲ್ಪಟ್ಟ ಟ್ಯಾಬ್ಲೋ ನಿನ್ನೆ ನಡೆದ ಮಂಗಳೂರಿನ ವಾಮಂಜೂರಿನಲ್ಲಿ ಆಯೋಜಿಸಿರುವ ಶಾರದ ಮಾತೆಯ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದೆ ಎಂದು ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳವಾರದ ಮಂಗಳೂರು ದಸರಾ ಮೆರವಣಿಗೆಯಲ್ಲಿ ಕುಮಾರಿ ಸೌಜನ್ಯಾಳ ಫೋಟೊ ಹಾಕಿದ್ದ ಟ್ಯಾಬ್ಲೋವನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸಂಚಾರಕ್ಕೆ ಅವಕಾಶ ನೀಡದೆ ಪೊಲೀಸರ ಮೂಲಕ ಸೌಜನ್ಯಳ ನ್ಯಾಯಾಕ್ಕಾಗಿ ಮಾಡುತ್ತಿರುವ ಹೋರಾಟ ಹತ್ತಿಕ್ಕಲು ನೋಡಿದವರಿಗೆ ಎದಿರೇಟು ನೀಡಲು ಸೌಜನ್ಯ ಪರ ಇರುವ ಸಾವಿರಾರು ಹೋರಾಟಗಾರರು ನಿರ್ಧರಿಸಿದ್ದಾರೆ.ಆಯೋಜಿಸಿರುವ ಶಾರದ ಮಾತೆಯ ಭವ್ಯ ಶೋಭಾಯಾತ್ರೆಯಲ್ಲಿ ಇದೇ ಟ್ಯಾಬ್ಲೋ ಸೌಜನ್ಯಳ ಭಾವ ಚಿತ್ರದೊಂದಿಗೆ ಭಾಗವಹಿಸಲಿದ್ದು ಸಾವಿರಾರು ಜನ ಇದನ್ನು ವೀಕ್ಷಿಸಲಿದ್ದಾರೆ. ಶಾರದ ಮಾತೆಯ ಶೋಭಾ ಯಾತ್ರೆಯಲ್ಲಿ ಟ್ಯಾಬ್ಯೋ ಪಾಲ್ಗೊಳ್ಳಲು ಶಾರದ ಉತ್ಸವ ಸಮಿತಿ ಆಮಂತ್ರಿಸಿದೆ. ನವರಾತ್ರಿ ಸಂದರ್ಭದಲ್ಲಿ ಕುದ್ರೊಳಿ ಆಡಳಿತ ಸಮಿತಿ ಸೌಜನ್ಯಾಗೆ ದ್ರೋಹ ಮಾಡಿದ್ದಾರೆ. ಅತ್ಯಾಚಾರಿಗಳ ಪರ ನಿಂತಿದ್ದಾರೆ. ಇವರಿಗೆ ಆ ಶಿವನೇ ಮುನಿಯುತ್ತಾನೆ. ಜನಾರ್ದನ ಪೂಜಾರಿ ಹಿಂದಿನಂತೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲ ಖಂಡಿತ ಇದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ನಾನೇ ಸ್ವತಃ ಪೂಜಾರಿ ಅವರನ್ನು ಕಂಡು ಈ ಕಹಿ ಅನುಭವದ ಬಗ್ಗೆ ಮಾತಾನಾಡುತ್ತೇನೆ. ಇದಕ್ಕೆ ಯಾವುದೇ ದೊಣ್ಣೆನಾಯಕರ ಅಪ್ಪಣೆ ಬೇಡಾ ಎಂದು ಟ್ಯಾಬ್ಲೋ ಆಕ್ಷೇಪಿಸಿದವರ ವಿರುದ್ದ ಹರಿಹಾಯ್ದಿದ್ದಾರೆ.