December 21, 2024
WhatsApp Image 2024-03-25 at 7.52.13 PM

ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ದೇಗುಲ ನಿರ್ಮಾಣ ಮತ್ತು ಪ್ರಾಣಪ್ರತಿಷ್ಠಾಪನೆ ಮತ್ತು ಅದರ ಬಳಿಕ ಉಡುಪಿ ವಡಭಾಂಡೇಶ್ವರದಲ್ಲಿ ಪ್ರಾಚೀನವಾದ ಪೂರ್ವಾವತಾರದಲ್ಲಿ ಲಕ್ಷ್ಮಣನೇ ಆಗಿದ್ದ ಬಲರಾಮರ ಸನ್ನಿಧಿಯ ಪುನರುತ್ಥಾನ ಪುನಃ ಪ್ರತಿಷ್ಠೆಯೂ ಸಂಪನ್ನಗೊಳ್ಳುತ್ತಿರುವುದು ಅತ್ಯಂತ ಅಚ್ಚರಿಯ ಸಂಗತಿಯಾಗಿದ್ದು ಕಾಲವೇ ಈ ಎರಡನ್ನೂ ನಿರ್ಣಯಿಸಿದಂತಿದೆ ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿಪ್ರಾಯಿಸಿದ್ದಾರೆ .

ಅಯೋಧ್ಯೆಯ ರಾಮನ ಪಾದಮೂಲದಲ್ಲಿಟ್ಟು ಅರ್ಚಿಸಿ ಪೂಜಿಸಿ ತಾವು ತೆಗೆದುಕೊಂಡು ಬಂದ ಭಗವಂತನ ಸಂಕರ್ಷಣ ಶಾಲಗ್ರಾಮವನ್ನು ನವೀಕರಣಗೊಂಡ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ದಿನಾಂಕ 21 ರ ಗುರುವಾರದಂದು ಹಸ್ತಾಂತರಿಸಿ ಸಂತಸವನ್ನು ವ್ಯಕ್ತಪಡಿಸಿದರು .
ಇದೊಂದು ಅಪೂರ್ವ ಯೋಗವಾಗಿದ್ದು ಬಲರಾಮನು ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ ಅವತರಿಸಿದ್ದ. ಭಗವಂತನ ಸಂಕರ್ಷಣರೂಪವೇ ಆಗಿರುವುದರಿಂದ ಬಲರಾಮನಲ್ಲಿಗೆ ಅಯೋಧ್ಯೆಯಿಂದ ಸಂಕರ್ಷಣ ಶಾಲಗ್ರಾಮವನ್ನು ಪೂಜಿಸಿ ತರಲಾಗಿದೆ .‌ ಆ ಹಿನ್ನೆಲೆಯಲ್ಲಿ ರಾಮ‌ ಬಲರಾಮರ ಸನ್ನಿಧಿಗಳ ಪುನರುತ್ಥಾನ ಕಾರ್ಯ ಏಕಕಾಲದಲ್ಲಿ ನಡೆಯುತ್ತಿರುವುದರಿಂದ ದೇಶಕ್ಕೆ ಮಂಗಳವಾಗಲಿದೆ ಎಂದರು .
ಈ ಸತ್ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ರಾಮ ಬಲರಾಮರ ಅನುಗ್ರಹದ ಬಲ ಸದಾ ಇರಲಿ ಎಂದರು .

ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಿಮಿತ್ತ ಹಮ್ಮಿಕೊಂಡ ಭಜನೋತ್ಸವಕ್ಕೆ ತಾಳ ಹಿಡಿದು ಭಜನೆ ಮಾಡಿ ಚಾಲನೆ ನೀಡಿದರು .
ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ , ಪ್ರಧಾನ ಅರ್ಚಕ ಶ್ರೀನಿವಾಸ ಭಟ್ , ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಡೆಕಾರ್ ಶ್ರೀಶ ಭಟ್ , ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ ಸತ್ಯನಾರಾಯಣ ಆಚಾರ್ಯ , ಪೆರಂಪಳ್ಳಿ ವಾಸುದೇವ ಭಟ್ , ಮುರಳೀಕೃಷ್ಣರಾವ್ ಬಡಾನಿಡಿಯೂರು ಮತ್ತಿತರರು ಇದ್ದರು .‌

About The Author

Leave a Reply

Your email address will not be published. Required fields are marked *

You cannot copy content of this page.