October 18, 2024
WhatsApp Image 2024-01-26 at 12.04.46 PM

ಬೆಳ್ತಂಗಡಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ‌‌ ದರ್ಶನ‌ ಪಡೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಸಮೇತರಾಗಿ ಗುರುವಾರ ರಾತ್ರಿಯೇ‌ ಆಗಮಿಸಿ ಧರ್ಮಸ್ಥಳ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಗ್ಗೆ ಮಂಜುನಾಥ ಸ್ವಾಮಿ ವಿಶೇಷ ದರ್ಶನ ಪಡೆದಿದ್ದಾರೆ.

ಇನ್ನು ಮಂಜುನಾಥ ದೇವರಿಗೆ ಪೂಜೆ ಸಲ್ಲಿಸಿದ ದಂಪತಿಗಳು ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ‌ಹೆಗ್ಗಡೆಯವರನ್ನು ಭೇಟಿ‌‌ ಮಾಡಿ‌ದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.