November 22, 2024
full

ಮಂಗಳೂರು: ಇತ್ತೀಚೆಗೆ ನಗರದ ಹಂಪನಕಟ್ಟೆಯ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಶರವು ಗುಳಿಗ ದೈವದ ಆಗ್ರಹಕ್ಕೆ ತುತ್ತಾಗಿ, ಗುತ್ತಿಗೆದಾರನೇ ದೈವಕ್ಕೆ ಶರಣಾಗಿದ್ದ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು.

ಇದೀಗ ಅದೇ ಶರವು ಗುಳಿಗ ದೈವವು ವೆನ್ಲಾಕ್ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಆರಾಧನೆಗೆ ಒಳಪಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಹಂಪನಕಟ್ಟೆಯ ವೆನ್ಲಾಕ್ ಜಿಲ್ಲಾಸ್ಪತ್ರೆ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕಟ್ಟಡದ ಮುಂಭಾಗದ ಅಶ್ವತ್ಥಮರದ ಬುಡದಲ್ಲಿ ಗುಳಿಗನನ್ನು ಕಲ್ಲುಹಾಕಿ ಆರಾಧಿಸಲಾಗುತ್ತಿದೆ. ಸುಮಾರು 40ವರ್ಷಗಳ ಹಿಂದೆ ಈ ಜಾಗದಲ್ಲಿ ದಲಿತ ಕುಟುಂಬಗಳು ವಾಸವಾಗಿತ್ತು. ಅವರನ್ನು ಬಳಿಕ ವಾಮಂಜೂರಿಗೆ ಸ್ಥಳಾಂತರಿಸಲಾಗಿತ್ತು. ಆಗ ಅವರು ತಾವು ಆರಾಧಿಸಿಕೊಂಡಿದ್ದ 5ದೈವಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. 4ದೈವಗಳು ಹೋದರೂ ಜಾಗದದೈವ ಗುಳಿಗ ಮಾತ್ರ ಹೋಗಿರಲಿಲ್ಲ. ಗುಳಿಗ ದೈವದ ಸಾನಿಧ್ಯ ಆಸ್ಪತ್ರೆಯ ಆವರಣದ ಅಶ್ವತ್ಥ ಮರದ ಬುಡದಲ್ಲಿತ್ತು. ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಳಿಗ ದೈವದ ಸಾನಿಧ್ಯವಿದ್ದ ಮರವನ್ನು ಅಲ್ಲಿಯೇ ಸ್ಥಳಾಂತರಿಸಲಾಗಿತ್ತು. ಕಾಮಗಾರಿ ಸಂದರ್ಭ ನಾಗಹತ್ಯೆಯೂ ಆಗಿತ್ತು. ಕಾರ್ಮಿಕರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗೆ ಹಲವು ತೊಂದರೆಗಳು ಕಂಡುಬಂದಿತ್ತು. ಎರಡ್ಮೂರು ಅಸಹಜ ಸಾವು ಸಂಭವಿಸಿತ್ತು. ಸಿಬ್ಬಂದಿಗೆ ವಿಚಿತ್ರ ಅನುಭವಗಳಾಗಿತ್ತು‌. ಆದ್ದರಿಂದ ಪ್ರಶ್ನಾಚಿಂತನೆ ಇಟ್ಟಾಗ ದೈವಸಾನಿಧ್ಯ ಇರುವಿಕೆ ಗೋಚರವಾಗಿತ್ತು. ಅದರಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ವಂತ ಖರ್ಚಿನಲ್ಲಿಯೇ ದೈವದ ಪುನರ್ ಪ್ರತಿಷ್ಠೆ ಮಾಡಿದ್ದಾರೆ. ಸದ್ಯ ಸ್ಥಳದಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.