February 25, 2026
WhatsApp Image 2026-02-25 at 5.24.25 PM

ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಗೌರವಾರ್ಥ ಮಾ.1 ರಂದು ರಾಜ್ಯಾದ್ಯಂತ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಗಾಗಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷವಾಕ್ಯದಡಿ ಬೃಹತ್ ಓಟವನ್ನು ಆಯೋಜಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲೂ ಮಾರ್ಚ್ 1ರ ಬೆಳಗ್ಗೆ 6 ಗಂಟೆಗೆ ಮ್ಯಾರಾಥಾನ್ ನಡೆಯಲಿದೆ. ಅಜ್ಜರಕಾಡು ಕ್ರೀಡಾಂಗಣದಲ್ಲಿ 5ಕಿಲೋ ಮೀಟರ್ ಮ್ಯಾರಥಾನ್‌ಗೆ ಚಾಲನೆ ಸಿಗಲಿದೆ.  ಫೆಬ್ರವರಿ 27ರ ಮಧ್ಯಾಹ್ನ 2 ಗಂಟೆವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಅಲ್ಲದೇ ಮಾ. 1ರ ಬೆಳಗ್ಗೆ 5.30ರಿಂದ ಸ್ಥಳದಲ್ಲೇ ನೋಂದಾವಣೆ ಮಾಡಿಕೊಳ್ಳಬಹುದು. 12 ವರ್ಷದಿಂದ 39 ವರ್ಷದವರೆಗಿನ ಸಾರ್ವಜನಿಕರು, 40 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ, ಪೊಲೀಸ್ ಸಿಬ್ಬಂದಿಗಳು ಹಾಗೂ ಬ್ಯಾಂಕ್ (ಎಸ್‌ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾ)ಸಿಬ್ಬಂದಿಗಳಿಗೆ 4 ವಿಭಾಗಗಳಲ್ಲಿ ಓಟವನ್ನು ಹಮ್ಮಿಕೊಳ್ಳಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.