
ಪುತ್ತೂರು : ಖಾಸಗಿ ವ್ಯಕ್ತಿಗೆ ಸೇರಿದ ಅಡಿಕೆ ತೋಟವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವಪತ್ತೆಯಾದ ಘಟನೆ ಪುತ್ತೂರು ನಗರಸಭಾ ವ್ಯಾಪ್ತಿಯ ಪಾಂಗಳಾಯ ಎಂಬಲ್ಲಿ ನಡೆದಿದೆ.
ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು. ಅಡಿಕೆಯ ಮರವೊಂದು ಅರ್ಧದಲ್ಲೆ ತುಂಡಾಗಿ ಶವದ ಸಮೀಪ ಪತ್ತೆಯಾಗಿದೆ. ಅಡಿಕೆ ಕದಿಯಲು ಬಂದು ಅಡಿಕೆ ಮರದಿಂದ ಬಿದ್ದು ಸತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
