ಭಟ್ಕಳ : ಆಸ್ತಿ ವಿವಾದಕ್ಕೆ ಒಂದೇ ಕುಟುಂಬಗ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ನಡೆದಿದೆ.
ಕೊಲೆಯಾದವರನ್ನು ಶಂಭು ಭಟ್ (65) ಆತನ ಪತ್ನಿ ಮಾದೇವಿ ಭಟ್, ಮಗ ರಾಜೀವ್ ಭಟ್ (34) ಹಾಗೂ ಮಗನ ಪತ್ನಿ ಕುಸುಮಾ ಭಟ್ (30) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು, ನಾಲ್ವರ ತಲೆಯನ್ನು ಕಡಿದು ಕೊಲೆ ಮಾಡಲಾಗಿದ್ದು, ಇಡೀ ಊರನ್ನೇ ಬೆಚ್ಚಿ ಬಿಳಿಸಿದೆ
ಸ್ಥಳಕ್ಕೆ ಪೊಲೀಸರು ಹಾಜರಾಗಿ ಪರಿಶೀಲನೆ ನಡೆಸಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.