ಕುಂದಾಪುರ: ಕೇಂದ್ರ ಸರಕಾರದ ಸ್ವನಿಧಿ ಸಾಲ ಯೋಜನೆಯ ಪ್ರಯೋಜನ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದ ಕುಂದಾಪುರದ ಯುವ ಉದ್ಯಮಿ ಮಣಿಕಂಠ ಅವರಿಗೆ ದಿಲ್ಲಿಯಲ್ಲಿ ಜ. 26ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಕೇಂದ್ರ ಸರಕಾರ ಆಹ್ವಾನಿಸಿದೆ.
ಬೆಂಗಳೂರಿನ ಬಿಬಿಎಂಪಿಯ ಮೂವರು ಹಾಗೂ ಕುಂದಾಪುರದ ಮಣಿಕಂಠ ಮಾತ್ರ ಈ ಯೋಜನೆಯಡಿ ಆಯ್ಕೆಯಾದವರು. ನಾಲ್ವರಿಗೂ ಕಾರ್ಯ ಕ್ರಮದಲ್ಲಿ ಭಾಗವಹಿಸಲು ವಸತಿ, ಪ್ರಯಾಣ ಎಲ್ಲ ವ್ಯವಸ್ಥೆ ಕೇಂದ್ರ ಸರಕಾರ ಕಲ್ಪಿಸಲಿದೆ.