March 22, 2026
WhatsApp Image 2025-12-24 at 10.22.10 AM

ಸುಳ್ಯ ತಾಲೂಕಿನ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ಇದರ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದು 2 ವರುಷ ಕಳೆದು ಹೋಗಿದೆ. ಆ ಬಳಿಕ ಆಡಳಿತಾಧಿಕಾರಿಯಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರ ನೇಮಕವಾಗಿತ್ತು.

ಶ್ರೀ ಕ್ಷೇತ್ರದಲ್ಲಿ ಜನವರಿ 16 ರಿಂದ ಜನವರಿ 21 ರವರೆಗೆ ವಾರ್ಷಿಕ ಜಾತ್ರೆ ಮತ್ತು ಬ್ರಹ್ಮರಥೋತ್ಸವ ಜರುಗಲಿರುವ ಆಮಂತ್ರಣ ಪತ್ರವನ್ನು ಡಿಸೆಂಬರ್ 23 ರಂದು ದೇಗುಲದಲ್ಲಿ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಸದಸ್ಯರಾದ ವೆಂಕಟಕೃಷ್ಣ ರಾವ್ ಇವರ ನೇತೃತ್ವದಲ್ಲಿ ಬಿಡುಗಡೆ ಗೊಳಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತರಿದ್ದರು. ಆದರೆ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಗೈರು ಹಾಜರಿ ವಿಶೇಷವಾಗಿತ್ತು.

About The Author

Leave a Reply

Your email address will not be published. Required fields are marked *

You cannot copy content of this page.