March 12, 2026
WhatsApp Image 2024-08-24 at 11.24.56 AM

ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ ಉಡುಪಿ ಇವರ ಸಹಯೋಗದಲ್ಲಿ ಸಂಸ್ಥೆಯ ನಿವಾಸಿನಿಯಾದ ಚಿ.ಸೌ.ಖುಷ್ಬು ಸುಮೇರಾ ಅವರ ವಿವಾಹವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ದಿನೇಶ ಎ.ಪಿ ಅಂಬುತೀರ್ಥ ಅವರ ಮಗನಾದ ಮಧುರಾಜ್ ಎ.ಡಿ ಅವರೊಂದಿಗೆ ನಗರದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ವಾದ್ಯ, ತಾಳ- ಮೇಳಗಳೊಂದಿಗೆ ನಡೆದ ಶುಭಲಗ್ನ ಸುಮುಹೂರ್ತದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶಾಸ್ತ್ರೋಸ್ತ್ರವಾಗಿ ಧಾರೆ ಎರೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ತೀರ್ಥಹಳ್ಳಿಯ ಮೂಲದ 29 ವರ್ಷ ವಯೋಮಿತಿಯ ಮಧುರಾಜ್ ಎ.ಡಿ ಅವರು, ನಿಲಯದ ನಿವಾಸಿನಿಯಾದ 21 ವರ್ಷ ಪ್ರಾಯದ ಖುಷ್ಬು ಸುಮೇರಾ ಅವರನ್ನು ಮದುವೆಯಾಗುವುದಾಗಿ ಈ ಹಿಂದೆ ಪ್ರಸ್ತಾಪಿಸಿರುತ್ತಾರೆ. ಮಧುರಾಜ್ ಅವರು ಪದವಿ ವಿದ್ಯಾರ್ಹತೆ ಹೊಂದಿದ್ದು, ಜೀವನ ನಿರ್ವಹಣೆಗಾಗಿ ಕೃಷಿ ಮತ್ತು ಕ್ಯಾಟರಿಂಗ್ ಕಾರ್ಯಗಳಲ್ಲಿ ತೊಡಗಿಕೊಂಡು, ಆರ್ಥಿಕವಾಗಿ ಸದೃಢರಾಗಿರುವ ಮಧುರಾಜ್ ಎ.ಡಿ ಕುಟುಂಬವನ್ನು ಪೊಲೀಸ್ ಹಾಗೂ ರಾಜ್ಯ ನಿಲಯದ ಸಿಬ್ಬಂದಿಗಳುಅವರ ಹಿನ್ನೆಲೆಯನ್ನು ಪರಿಶೀಲಿಸಿ, ಆರೋಗ್ಯ ದೃಢೀಕರಣ ಪಡೆದುಕೊಂಡು, ಹುಡುಗಿ ಒಪ್ಪಿಗೆಯೊಂದಿಗೆ ರಾಜ್ಯ ಮಹಿಳಾ ನಿಲಯದಲ್ಲಿ ಈ ಶುಭಕಾರ್ಯವನ್ನು ಅದ್ದೂರಿಯಾಗಿ ಮದುವೆಗೆ ದಾನಿಗಳು ಸಹಕಾರದಿಂದ ನಡೆಸಲಾಗಿದೆ ಎಂದರು.

 

About The Author

Leave a Reply

Your email address will not be published. Required fields are marked *

You cannot copy content of this page.