March 21, 2026
WhatsApp Image 2024-05-24 at 9.44.10 AM

ಬಂಟ್ವಾಳ : ಬಿ.ಸಿ.ರೋಡ್ ಬಸ್ ನಿಲ್ದಾಣದಿಂದ ಮಹಿಳೆಯೋರ್ವರು ಬಸ್ ಹತ್ತುವ ವೇಳೆ ಬ್ಯಾಗಿನೊಳಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ಗುರುವಾರ ವರದಿಯಾಗಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮ ನಡಿಗಲ್ – ಆದರ್ಶ ನಗರ ನಿವಾಸಿ ಜಗದೀಶ ಅವರ ಪತ್ನಿ ಶಶಿಕಲಾ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಮಗುವಿನ ಜೊತೆ ಗಂಡ ಬಸ್ ಹತ್ತಿದ್ದು ಅವರ ಹಿಂದೆ ಶಶಿಕಲಾ ಅವರು ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಿಂದ ಬ್ಯಾಗ್ ನೊಳಗಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.