ಮಣಿಪಾಲ: ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಪಶ್ಚಿಮ ಬಂಗಾಳ ಮೂಲದ ಆಶೀಮ್ ಮಂಡಲ್(22) ಎಂದು ಗುರುತಿಸಲಾಗಿದೆ. ಮಣಿಪಾಲ ಗಾರ್ಮೆಂಟ್ ಕಂಪನಿಯ ಉದ್ಯೋಗಿ, ಪಶ್ಚಿಮ ಬಂಗಾಳ ಮೂಲದ ಆಶೀಮ್ ಮಂಡಲ್ ಜೀವನದಲ್ಲಿ ಜಿಗುಪ್ಪೆಗೊಂಡಯು ಮಧ್ಯಾಹ್ನ ವೇಳೆ ವಾಸವಿರುವ ರೂಮಿನ ಶೌಚಾಲಯದಲ್ಲಿ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.