ಉಡುಪಿ: ಸ್ಕೂಟರ್ ಸಮೇತ ಹೊಳೆ ನೀರಿಗೆ ಬಿದ್ದ ವ್ಯಕ್ತಿಯನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೇಲೆತ್ತಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟ ಬಳಿಕ ಧಕ್ಕೆಯಲ್ಲಿ ರಾತ್ರಿ ಸಂಭವಿದೆ.
ಬೋಟೊಂದರ ಲೆಕ್ಕ ಸಹಾಯಕನಾಗಿ ಕೆಲಸ ಮಾಡುತ್ತಿರುವ ನಿಖಿಲ್ ಸುಮಾರು 8 ಗಂಟೆ ವೇಳೆಗೆ ತನ್ನ ಡಿಯೋ ಸ್ಕೂಟರಿನಲ್ಲಿ ಧಕ್ಕೆ ಬಳಿ ನಿಲ್ಲಿಸಲಾಗಿದ್ದ ಬೋಟ್‌ನ ಸಮೀಪಕ್ಕೆ ಬಂದಿದ್ದು ಈ ವೇಳೆ ನಿಯಂತ್ರಣ ತಪ್ಪಿ ಸ್ಕೂಟರ್ ಸಹಿತ ನೀರಿಗೆ ಬಿದ್ದಿದ್ದರು. ತತ್‌ಕ್ಷಣ ಈಶ್ವರ್ ಮಲ್ಪೆ ಮತ್ತು ಸ್ಥಳೀಯರು ಸೇರಿ ನಿಖಿಲ್ ಅವರನ್ನು ನೀರಿನಿಂದ ಮೇಲೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದರು. ಕೆಸರಿನಲ್ಲಿ ಹುದುಗಿ ಹೋಗಿದ್ದ ಸ್ಕೂಟರನ್ನು ಈಶ್ವರ್ ಮಲ್ಪೆ ಅವರು ನೀರಿಗೆ ಧುಮುಕಿ ಹಗ್ಗದ ನೆರವಿನಿಂದ ಮೇಲಕ್ಕೆ ತಂದರು.