ಉಡುಪಿ: ಶಿಕ್ಷಣ ಮತ್ತು ವೈದ್ಯಕೀಯ ವಿಚಾರದಲ್ಲಿ ಏಜ್ಯುಕೇಶನ್ ಹಬ್ ಜೊತೆಗೆ ದೇಶ ವಿದೇಶದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ್ ನಲ್ಲಿರುವ ಡ್ರಗ್ ಮಾಫಿಯಾ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ.
ದಿಟ್ಟ ಎಸ್‌ಪಿ ಅಕ್ಷಯ್ ಯುವ ಜನತೆ ಅದರಲ್ಲೂ ದೇವರಂತೆನೇ ಜನ ಭಾವಿಸುವ ವೈದ್ಯಕೀಯ ಕಾಲೇಜುಗಳ ಕ್ಯಾಂಪಸ್ ಗಳಲ್ಲಿ ಬೇರಿರುವ ಡ್ರಗ್ ಮತ್ತು ಸೆಕ್ಸ್ ಜಾಲದ ವಿರುದ್ದ ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಮಣಿಪಾಲ ವಿವಿ ಪೊಲೀಸ್ ಇಲಾಖೆಯ ಶಿಫಾರಾಸಿನ ಮೇರೆಗೆ 42 ವಿದ್ಯಾರ್ಥಿಗಳಿಗೆ ಅಮಾನತು ಮಾಡಿ ಗೇಟ್ ಪಾಸ್ ನೀಡಿದೆ. ಇದೇ ಹೊತ್ತಿನಲ್ಲಿ ಹೊರಗಿನಿಂದ ಡ್ರಗ್ಸ್ ಹಾಸ್ಟೆಲ್‌ಗಳಿಗೆ ಬರುತ್ತಿರುವ ಬಗ್ಗೆ ಭಯಾನಕ ಮಾಹಿತಿ ಹೊರ ಬಿದ್ದಿದೆ. ಬಹುತೇಕ ಹೊರ ರಾಜ್ಯಯಗಳಿಂದ ಬಂದಂತ ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿತ್ತಿರುವುದು ಗಮನಕ್ಕೆ ಬಂದಿದೆ . ಕಳೆದ ಬಾರಿ ಇದೇ ರೀತಿಯ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಮಣಿಪಾಲದ ಪ್ರತಿಷ್ಠಿತ ಮಾಹೆ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎನ್ನುವ ಇಲಾಖೆಯ ಬೇಡಿಕೆ ಹಿನ್ನಲೆಯಲ್ಲಿ ಇದೇ ರೀತಿ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ 42 ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಅಮಾನತು ಶಿಕ್ಷೆ ನೀಡಿದೆ.
ಇಲ್ಲಿ ಡ್ರಗ್ ಪೆಡ್ಲಿಂಗ್ ಮಾಡ್ತಾ ಇದ್ದ ಅನೇಕ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. MDMA, LSD, ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ದುರಂತವೆಂದರೆ ಮೆಡಿಕಲ್, ಮ್ಯಾನೇಜ್ಮೆಂಟ್, ಹೋಟೆಲ್ ಮ್ಯಾನೆಜ್‌ಮೆಂಟ್, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪಾರ್ಟ್ ಟೈಂ ಜಾಬಾಗಿ ಮಾಡುತ್ತಿದ್ದ ಡೆಲಿವರಿ ಬಾಯ್ ಕೆಲಸವನ್ನು ಉಪಯೋಗಿಸಿ ತಮ್ಮ ತಮ್ಮ ಹಾಸ್ಟೆಲ್‌ಗಳಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದರು..! ಜುಮೋಟೋದಲ್ಲಿ ಊಟ ಆರ್ಡರ್ ಮಾಡಿದ್ರೆ ಊಟದ ಜೊತೆ ಡ್ರಗ್ಸ್ ಕೂಡ ಸಪ್ಲೈ ಆಗುತ್ತಿದೆ. ಈ ಬಗ್ಗೆ ಮಾಹಿತಿ ಬಯಲಾಗಿದ್ದು ಪೊಲೀಸರು ಓರ್ವ ಜುಮೋಟೋ ಡಿಲಿವರಿ ಬಾಯ್ನನ್ನು ಬಂಧಿಸಿದ್ದಾರೆ . ರಾತ್ರಿ ವೇಳೆ 11.30 ರ ನಂತರ ಬರುವ ಊಟದ ಪಾಕೇಟ್ನಲ್ಲಿ ಡ್ರಗ್ಸ್ ತರಿಸಲಾಗುತ್ತಿತ್ತು. ಸ್ಮಾರ್ಟ್ ವಾಚ್ ಪೌಚ್ ಬಾಕ್ಸ್ ಒಳಗೆ LSD ಪೇಪರ್, ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು. ವಾಚ್ ಡಿಸ್ಕ್ರಿಪ್ಷನ್ ಕಟ್ ಮಾಡಿ LSD ನ್ನು ಫಿಕ್ಸ್ ಮಾಡಿ ಕಳುಹಿಸುತ್ತಿದ್ದರು ಪೊಲೀಸ್ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಮಣಿಪಾಲ್ ಹಾಸ್ಟೆಲ್ ರೂಂಗಳಲ್ಲಿ ಕಾಂಡೋಮ್ ರಾಶಿ..! ಡ್ರಗ್ ವಿಷಯವಾಗಿ ಹಾಸ್ಟೆಲ್‌ಗಳಿಗೆ ರೈಡ್ ಮಾಡಲು ಹೋದ ಉಡುಪಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಮಣಿಪಾಲ್ ಹಾಸ್ಟೆಲ್ನ ರೂಂಗಳಲ್ಲಿ ರಾಶಿ ರಾಶಿ ಕಾಂಡೋಮ್ಗಳು ಪತ್ತೆಯಾಗಿವೆ. ಮತ್ತಿನ ನಶೆಯಲ್ಲಿ ವಿದ್ಯಾರ್ಥಿನಿಯರ ಜೊತೆ ಕಾಮದಾಟ ನಡೆಯುತ್ತಿದ್ದದ್ದು ಬಯಲಾಗಿದೆ. ಯುವಕ-ಯುವತಿಯರು ಒಟ್ಟಿಗೆ ಗಾಂಜಾ ಸೇದುತ್ತಿದ್ದರು. ಯುವಕರು ತಮ್ಮ ಗರ್ಲ್ ಫ್ರೆಂಡ್ಸ್ಗಳಿಗೆ ಡ್ರಗ್ಸ್ ತಂದುಕೊಟ್ಟು ಬಳಿಕ ಸೆಕ್ಸ್ ಗೆ ತಳ್ಳಿ ಅದನ್ನೆ ರೂಢಿಯಾಗಿಸಿಕೊಂಡಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ. ಸದ್ಯ ಈ ಡ್ರಗ್ ಮಾಫಿಯಾದ ಬಗ್ಗೆ ಮಾತನಾಡಿರುವ ಎಸ್ಪಿ ಅಕ್ಷಯ್, ಮಣಿಪಾಲದಲ್ಲಿ ಡ್ರಗ್ ಜಾಲ ಸಾಕಷ್ಟು ವ್ಯಾಪಿಸಿದೆ ಆದರೆ. ಡ್ರಗ್ ಮುಕ್ತ ಮಣಿಪಾಲ ಮಾಡಲು ಮಾಹೆ ಯೂನಿವರ್ಸಿಟಿ ಕೂಡ ಸಹಕಾರ ನೀಡಿದ್ದು ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.