March 6, 2026
WhatsApp Image 2023-06-23 at 8.38.19 AM

ತುಳಸಿ ಶಿವಳ್ಳಿ ಮಾದ್ವ ಮಹಾಮಂಡಲ ಉಡುಪಿ ಇವರಿಂದ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ, ತುಷಿಮಾಮ ಕಡಿಯಾಳಿ ಅಂಗಸಂಸ್ಥೆಯ ಸಹಯೋಗದೊಂದಿಗೆ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಮಧ್ವ -ಯಾನ ಗಾನ ನಮನದ ರಜತ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮದ್ವಾನುಗ್ರಹ ಪ್ರಶಸ್ತಿCಪ್ರದಾನ ಹಾಗೂ ಮಧ್ವ -ಯಾನ ಗಾನ ನಮನ ಕಾರ್ಯಕ್ರಮ ದಿನಾಂಕ 25.06.2023, ರವಿವಾರ ಸಂಜೆ ಗಂಟೆ 3:30 ರಿಂದ 7ರವರೆಗೆ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಡಾ। ಕಟ್ಟೆ ರವಿರಾಜ ಆಚಾರ್ಯ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಕಡಿಯಾಳಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಡಾ। ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಎಂ. ಬಿ ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ,ಮಂಜುನಾಥ ಉಪಾಧ್ಯ, ಅರವಿಂದ ಆಚಾರ್ಯ, ರಘುಪತಿ ಉಪಾಧ್ಯ ಉಪಸ್ಥಿತರಿರುವರು.

ಶ್ರೀ ಮಧ್ವಾನುಗ್ರಹ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸರು, ಲೇಖಕರು, ಚಿಂತಕರು ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ ಇವರಿಗೆ ಪ್ರದಾನ ಮಾಡಲಾಗುವುದು ಎಂದು ತುಷಿಮಾಮ ಅಧ್ಯಕ್ಷ ರವಿಪ್ರಕಾಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.