March 19, 2026
WhatsApp Image 2025-05-23 at 10.04.09 AM

ಕಳೆದ  ವರ್ಷ ಅಂಕೋಲಾ ತಾಲೂಕಿನ ಬಳಲೆ ಹೋಬಳಿ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66ರ ಕೋಡ್ವಣಿ ಬಳಿ ಗುಡ್ಡ ಕುಸಿದು 12 ಜನರ ಸಾವಿಗೆ ಕಾರಣವಾದ ಈ ಪ್ರದೇಶವನ್ನು ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಿ , ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ.

ಶಿರೂರು ಗ್ರಾಮ ವ್ಯಾಪ್ತಿಯ ಕೋಡ್ಕಣಿ ಗ್ರಾಮದ ವ್ಯಾಪ್ತಿಯಲ್ಲಿ ಭಾರೀ ಗುಡ್ಡ ಕುಸಿತ ಉಂಟಾದ ಪ್ರದೇಶ ಅಪಾಯಕಾರಿಯಾಗಿದೆ.ಶಿರೂರು ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇರುವ ಗ್ರಾಮದ ಜನರು ಗುಡ್ಡದ ಸಮೀಪ ನಿಲ್ಲದಂತೆ ಹಾಗೂ ಫೋಟೋ ಶೂಟ್ ಮಾಡದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಆದೇಶ ಮಾಡಿದ್ದಾರೆ.

ಇದಲ್ಲದೇ ಗುಡ್ಡದ ಪಕ್ಕದಲ್ಲೇ ಇರುವ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ಹಾಗೂ ಸಾರ್ವಜನಿಕರು ಇಳಿಯುವುದಕ್ಕೆ ನಿರ್ಭಂದ ವಿಧಿಸಲಾಗಿದೆ.

ಜಿಲ್ಲಾಧಿಕಾರಿ ಆದೇಶದಲ್ಲಿ  ಏನಿದೆ?

2024 ನೇ ಸಾಲಿನಲ್ಲಿ ದಿನಾಂಕ 19-07-2024 ರಂದು ಅಂಕೋಲಾ ತಾಲೂಕಿನ ಬಳಲೆ ಹೋಬಳಿ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಶಿರೂರು ಗ್ರಾಮ ವ್ಯಾಪ್ತಿಯ 147 300 ರಿಂದ ಕೋಡ್ಸಣಿ ಗ್ರಾಮದ ವ್ಯಾಪ್ತಿಯ 148 800 ಚೈನೆಜ್ ನಡುವೆ ಭಾರಿ ಗುಡ್ಡ ಕುಸಿತ ಉಂಟಾಗಿ 10 ಜನ ಮೃತಪಟ್ಟಿದ್ದು 2 ಕಾಣೆಯಾಗಿದ್ದು, ಈ ಸ್ಥಳವು ಭೂಕುಸಿತ ಸೂಕ್ಷ್ಮ ಪ್ರದೇಶವಾಗಿರುತ್ತದೆ.

ಪ್ರಸ್ತುತ ವರ್ಷದ ಮಳೆಗಾಲವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ ಅಂಕೋಲಾ ರವರು ಸ್ಥಳ ಪರಿಶೀಲನೆ ಕೈಗೊಂಡ ಅವಧಿಯಲ್ಲಿ ಗುಡ್ಡದ ಕೆಲವು ಭಾಗಗಳಲ್ಲಿ ಮಣ್ಣು ಸಡಿಲುಗೊಂಡು ನೆಲಕ್ಕೆ ಉರುಳುತ್ತಿರುವುದು ಕಂಡುಬoದಿದ್ದು, ಈ ವರ್ಷವು ಸಹ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಪ್ರಸ್ತುತ ಈ ಸ್ಥಳದಲ್ಲಿ ಹಲವಾರು ಟ್ರಕ್‌ಗಳು ಹಾಗೂ ಕೆಲ ಪ್ರವಾಸಿಗರು ಈ ಪ್ರದೇಶದಲ್ಲಿ ನಿಂತು ಫೋಟೋಗಳನ್ನು ತೆಗೆಯುವುದು ನದಿಯ ನೀರಿನಲ್ಲಿ ಸ್ನಾನ ಮಾಡುವುದು ಅಥವಾ ವಾಹನ ನಿಲ್ಲಿಸಿ ಅದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮುಂಗಾರು ಪೂರ್ವ ಮಳೆ ಪ್ರಾರಂಭಗೊಂಡಿರುವುದರಿಂದ ಹಾಗೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಮತ್ತು ಮುಂಗಾರು ಸಹ ಶೀಘ್ರದಲ್ಲಿ ಆರಂಭಗೊಳ್ಳುವುದರಿoದ ಅಂಕೋಲಾ ತಾಲೂಕಿನ ಬಳಲೆ ಹೋಬಳಿಯ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ಚೈನೇಜ್ 147 300 ರಿಂದ 148 800 ವರೆಗಿನ ರಾಷ್ಟ್ರೀಯ ಹೆದ್ದಾರಿ ಪ್ರದೇಶ ಹಾಗೂ ಅದರ ಮುಂಭಾಗದಲ್ಲಿ ಇರುವ ಗಂಗಾವಳಿ ನದಿಯ ವ್ಯಾಪ್ತಿಯನ್ನು ಆಪಾಯಕಾರಿ ವಲಯವೆಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಘೋಷಿಸಿ, ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಿ, ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.