

ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಎ. 22 ರಂದು ಮಂಗಳವಾರ ಮಧ್ಯಾಹ್ನ ಮಣಿಪಾಲದ ದಶರಥ ನಗರ ಬಾಲಿಗಬೆಟ್ಟು ಪಂಚಾಯತ್ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಪರ್ಕಳದ ದೇವಿ ನಗರ ನಿವಾಸಿ ಅಬೂಬಕರ್ ಮೃತಪಟ್ಟ ಸ್ಕೂಟರ್ ಸವಾರ.
ಅಬೂಬಕರ್ ಅವರು ಕಾರ್ಯನಿಮಿತ್ತ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಪಕ್ಕದ ಕಂದಕಕ್ಕೆ ಉರುಳಿ ಬಿದ್ದು ಗಂಭೀರ ಗಾಯ ಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಅಬೂಬಕ್ಕರ್ ಅವರು ಹಲವು ಸಂಘ ಸಂಸ್ಥೆಗಳಲ್ಲಿ ದುಡಿದು ಸಮಾಜ ಸೇವೆ ಕಾರ್ಯನಿರತದಲ್ಲಿ ಭಾಗಿಯಾಗಿದ್ದರು.
ಮೃತರು ಹೆಂಡತಿ ಮಕ್ಕಳನ್ನು ಹಾಗೂ ಅಪಾರ ಬಂಧು ಬಂದು ಬಳಗವನ್ನು ಅಗಲಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.