ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕದ ಖಾಸಗಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.ಸಮುದ್ರ ಪಾಲಾದ ವಿದ್ಯಾರ್ಥಿ ಶಿವಮೊಗ್ಗದ ತಿಲಕ್ (21) ಎಂದು ತಿಳಿಯಲಾಗಿದೆ.
ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅವರು ಸಂಜೆ ವಿಹಾರಕ್ಕೆಂದು ತೆರಳಿದ್ದರು.ಇತರ ವಿದ್ಯಾರ್ಥಿಗಳ ಜತೆ ಸಮುದ್ರದಲ್ಲಿ ಈಜಾಟ ನಡೆಸುತ್ತಿದ್ದಾಗ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದು, ಸ್ಥಳೀಯರ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.