March 20, 2026
WhatsApp Image 2024-10-21 at 9.18.49 AM

ಬಂಟ್ವಾಳ:ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆದಿತ್ಯವಾರ ಬೆಳಗ್ಗೆ ಇನ್ನಿತರ ಕಲಾವಿದರೊಂದಿಗೆ  ಬೆಂಗಳೂರಿಗೆ ತೆರಳಿದ್ದ   ಅವರಿಗೆ ಇಂದು  ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ  ತೀವ್ರತರವಾದ ಹೃದಯಾಘಾತಕ್ಕೊಳಗಾದ ಅವರನ್ನು ಜೊತೆ ಕಲಾವಿದರು ತಕ್ಷಣ ಬೆಂಗಳೂರಿನ ಸ್ಥಳೀಯ  ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂಧಿಸದೇ  ನಿಧನ ಹೊಂದಿದ್ದಾರೆ . ಬೆಂಗಳೂರಿನ  ಆಸ್ಪತ್ರೆಯಲ್ಲಿರುವ ಮೃತ ದೇಹವನ್ನು  ಆಂಬುಲೆನ್ಸ್ ಮೂಲಕ ಊರಿಗೆ ತರಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.