
ಸುಳ್ಯ: ಗೂನಡ್ಕದ ಕೊಠಡಿ ಒಂದರಲ್ಲಿ ಕಲ್ಲಡ್ಕದ ಯುವಕನೊಬ್ಬ ನೇಣು ಬಿಗಿದು ಆತ್ಮ*ಹ*ತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತನನ್ನು ಕಲ್ಲಡ್ಕದ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ.
ತಿಲಕ್ ಅವರು ನಿನ್ನೆ ಸಂಜೆ ಕಾರಿನಲ್ಲಿ ಮಡಿಕೇರಿಗೆಂದು ಕಲ್ಲಡ್ಕದಿಂದ ಹೊರಟಿದ್ದರು. ಸಂಜೆ ವೇಳೆ ಗೂನಡ್ಕ ಎಂಬಲ್ಲಿ ರೂಮ್ ಮಾಡಿಕೊಂಡಿದ್ದರು. ಅಲ್ಲೇ ಅವರು ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
ಸಮಾಜ ಸೇವಕ ತಾಜ್ ಟರ್ಲಿ ಎಂಬವರು ಮಾಡಿನ ಮೂಲಕ ರೂಮಿನೊಳಕ್ಕೆ ಪ್ರವೇಶಿಸಿ ತಿಲಕ್ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಆತ್ಮ*ಹ*ತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸುಳ್ಯದ ಸರ್ಕಾರ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.
