December 22, 2024
WhatsApp Image 2024-05-05 at 10.21.13 AM

ಮಂಗಳೂರು: ಡಿಸ್ಕೌಂಟ್ ಬೆಲೆಗೆ ಷೇರು ಮಾರಾಟದ ಆಮಿಷಕ್ಕೆ ಬಲಿಯಾದ ವ್ಯಕ್ತಿಯೊಬ್ಬರು ಬರೋಬ್ಬರಿ 17.5 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. 2024 ಮಾ.23 ರಂದು ಸಂತ್ರಸ್ತ ವ್ಯಕ್ತಿಯ ವಾಟ್ಸ್ಆ್ಯಪ್ ಖಾತೆಗೆ Alice-LRC ಎಂಬ ವಾಟ್ಸ್ಆ್ಯಪ್ ಗ್ರೂಪ್ ಲಿಂಕ್ ಬಂದಿತ್ತು. ಆ ಗ್ರೂಪ್‌ಗೆ ಇವರು ಸೇರ್ಪಡೆಗೊಂಡಿದ್ದರು. ಆ ಬಳಿಕ ಷೇರು ಮಾರುಕಟ್ಟೆಯಲ್ಲಿ ಡಿಸ್ಕೌಂಟ್ ಬೆಲೆಗೆ ಷೇರುಗಳನ್ನು ಮಾರಾಟ ಮಾಡುವುದಾಗಿ ಪದೇಪದೇ ಸಂದೇಶ ಬಂದಿತ್ತು. ಇದನ್ನು ನಂಬಿದ ಅವರು Alice-LRC ಖಾತೆಯಲ್ಲಿ ಹೂಡಿಕೆ ಮಾಡಲು ತನ್ನ ಬ್ಯಾಂಕ್ ಖಾತೆಗಳಿಂದ, ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ಹೀಗೆ ಒಟ್ಟು ರೂ. 17,57,000/- ಹಣವನ್ನು ಹೂಡಿಕೆ ಮಾಡಿದ್ದಾರೆ. ಬಳಿಕ ಆರೋಪಿಗಳು ಇನ್ನೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ತಾನು ಈ ಹಿಂದೆ ಜಮಾ ಮಾಡಿರುವ ಹಣ ತನ್ನ ಖಾತೆಗೆ ಮರು ಜಮಾ ಆಗದೆ ಇರುವುದರಿಂದ, ತಾನು ವಂಚನೆಗೊಳಗಾಗಿರುವುದು ಅವರಿಗೆ ತಿಳಿದು ಬಂದಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.